
ಚಳಿಗಾಲದಲ್ಲಿ ತಂಪಾದ ವಾತಾವರಣವಿರುತ್ತದೆ. ಕೆಲವು ಹಣ್ಣುಗಳ ಸೇವನೆ ಶೀತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಚಳಿಗಾಲದಲ್ಲಿ ಈ ಹಣ್ಣುಗಳನ್ನು ಸೇವಿಸುವುದರಿಂದ ದೂರ ಇರುವುದು ಉತ್ತಮ.
ಚಳಿಗಾಲದಲ್ಲಿ ಸೇವಿಸಬಾರದ ಹಣ್ಣುಗಳು:
ಕಲ್ಲಂಗಡಿ ಮತ್ತು ಖರ್ಬೂಜ: ಈ ಎರಡು ಹಣ್ಣುಗಳು ಶೀತ ಸ್ವಭಾವದವು. ಇವುಗಳ ಸೇವನೆ ದೇಹದ ಉಷ್ಣತೆ ಕಡಿಮೆ ಮಾಡುತ್ತವೆ. ಅದರಲ್ಲಿಯೂ ಚಳಿಗಾಲದಲ್ಲಿ ಇವುಗಳ ಸೇವನೆ ಶೀತ, ಕೆಮ್ಮು ಮತ್ತು ಗಂಟಲು ನೋವು ಉಂಟು ಮಾಡಬಹುದು.
ಎಳೆ ನೀರು: ಬೇಸಿಗೆಯಲ್ಲಿ ಅತ್ಯುತ್ತಮವಾದರೂ, ಚಳಿಗಾಲದಲ್ಲಿ ದೇಹವನ್ನು ಶೀತಗೊಳಿಸುತ್ತದೆ. ಆರೋಗ್ಯದ ಏರುಪೇರಿಗೂ ಕಾರಣವಾಗಬಹುದು.
ಅನಾನಸ್: ಚಳಿಗಾಲದಲ್ಲಿ ಅನಾನಸ್‌ನ ಅತಿಯಾದ ಸೇವನೆ ಸೈನಸ್ ಮತ್ತು ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು.
ಬಾಳೆಹಣ್ಣು: ಬಾಳೆಹಣ್ಣು ಪೌಷ್ಟಿಕ ಹಣ್ಣಾದರೂ ಚಳಿಗಾಲದಲ್ಲಿ ಇದರ ಅತಿಯಾದ ಸೇವನೆಯಿಂದ ಕಫ ಮತ್ತು ಜಲೋದರ ಹೆಚ್ಚಾಗಬಹುದು. ವಿಶೇಷವಾಗಿ ರಾತ್ರಿಯ ವೇಳೆ ಸೇವಿಸುವುದನ್ನು ತಪ್ಪಿಸಬೇಕು.
ಋತುವಿಗೆ ಅನುಗುಣವಾಗಿ ಸಿಗುವ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹವು ಪ್ರಕೃತಿಯೊಂದಿಗೆ ಸಮತೋಲನದಲ್ಲಿರುತ್ತದೆ. ಆರೋಗ್ಯವೂ ವೃದ್ಧಿಯಾಗುತ್ತದೆ.
(ಡಾ. ಎಡ್ವಿನಾ ರಾಜ್, ಮುಖ್ಯಸ್ಥರು, ಕ್ಲಿನಿಕಲ್ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗ, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.