ಎಐ ಚಿತ್ರ
ದೀಪಾವಳಿ ಎಂದರೆ ಭಾರತೀಯರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಒಂದು ತಿಂಗಳ ಮುಂಚೆಯೇ ಮನೆಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸೋದಕ್ಕೆ ಮುಂದಾಗುತ್ತಾರೆ. ಆದರೆ ದೀಪಾವಳಿಯ ಮೊದಲು ಮನೆಯಲ್ಲಿ ಈ ವಸ್ತುಗಳಿದ್ದರೆ ತೆಗೆದುಹಾಕಬೇಕೆಂದು ಜ್ಯೋತಿಷಿಗಳಾದ ಎಲ್. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಚಿತ್ರ
ದೀಪಾವಳಿಯ ಅಮಾವಾಸ್ಯೆಯಿಂದ ಶ್ರೀ ಮಹಾಲಕ್ಷ್ಮಿ ಜನಿಸಿದ್ದಳು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದು ಶ್ರೀಮನ್ನಾರಾಯಣ ಸಮೇತ ವೈಕುಂಠದಿಂದ ಭೂಮಿಗೆ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ಕೆಲವೊಂದು ವಸ್ತುಗಳನ್ನು ದೀಪಾವಳಿ ಮೊದಲು ಮನೆಯಿಂದ ಹೊರಗೆ ಹಾಕಬೇಕು.
ಯಾವ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು?
ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ತೆಗೆದು ಹೊರಹಾಕುವುದು ಉತ್ತಮ.
ಕೆಟ್ಟು ನಿಂತಿರುವ ಗಡಿಯಾರ
ಹರಿದು ಹೋದ ಚಿತ್ರಪಟಗಳು
ಉಪಯೋಗಕ್ಕೆ ಬಾರದ ಕುರ್ಚಿಗಳು ಇದ್ದರೆ ಅವುಗಳನ್ನು ಒಂದು ಕಡೆ ಸುಟ್ಟು ಹಾಕುವುದು ಉತ್ತಮ.
ಒಡೆದು ಹೋಗಿರುವ ದೇವರ ಫೋಟೋಗಳಿದ್ದರೆ ನೀರಿನಲ್ಲಿ ಬಿಡುವುದು ಬಿಡಿ.
ಕೊಳಕಾದ ಬಟ್ಟೆಗಳು, ಹರಿದುಹೋದ ಅಥವಾ ಅರ್ಧಂಬರ್ಧ ಸುಟ್ಟು ಹೋಗಿದ ವಸ್ತ್ರಗಳನ್ನು ಹೊರಗೆ ಹಾಕಿ.
ಕಿತ್ತು ಹೋದ ಚಪ್ಪಲಿಗಳು ಬಿಸಾಕುವುದು ಉತ್ತಮ.
ಹಿಂದಿನ ವರ್ಷ ಬಳಸಿದ ದೀಪಗಳನ್ನು ಈ ವರ್ಷ ಬಳಸುವುದು ಸೂಕ್ತವಲ್ಲ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.