ADVERTISEMENT

Deepavali | ದೀಪಾವಳಿಯಂದು ಯಾವ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡಬೇಕು?

ಎಲ್.ವಿವೇಕಾನಂದ ಆಚಾರ್ಯ
Published 19 ಅಕ್ಟೋಬರ್ 2025, 0:30 IST
Last Updated 19 ಅಕ್ಟೋಬರ್ 2025, 0:30 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

   

ದೀಪಾವಳಿ ಹಿಂದೂಗಳ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಹಬ್ಬ ಬಂದರೆ ಎಲ್ಲರೂ ತಮ್ಮ ಮನೆಗಳನ್ನು ತಳಿರು ತೋರಣದಿಂದ ಅಲಂಕರಿಸಿತ್ತಾರೆ. ಆದರೆ, ಅನೇಕರಿಗೆ ಹಬ್ಬದ ಸಂದರ್ಭದಲ್ಲಿ ಲಕ್ಷ್ಮೀ ಪೂಜೆ ಯಾವಾಗ ಮಾಡಬೇಕು ಎಂಬ ಮಾಹಿತಿ ಇರುವುದಿಲ್ಲ.

ದೀಪಾವಳಿಯಂದು ಲಕ್ಷ್ಮೀ ಪೂಜೆ ಯಾವ ಸಮಯದಲ್ಲಿ ಮಾಡಬೇಕು ಎಂಬುದನ್ನು ಜ್ಯೋತಿಷಿಗಳಾದ ಎಲ್‌. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ. ಈ ಅಮಾವಾಸ್ಯೆ ಸಮಯದಲ್ಲಿ ಲಕ್ಷ್ಮಿ ಪೂಜೆ ಹಾಗೂ ಕುಬೇರ ಪೂಜೆ ಮಾಡುವುದು ಉತ್ತಮ ಎಂದಿದ್ದಾರೆ. ಅಕ್ಟೋಬರ್ 20ರಂದು ಸೋಮವಾರ ಲಕ್ಷ್ಮೀದೇವಿಯನ್ನು ಪೂಜಿಸಲು ಶುಭ ಲಗ್ನ ಸಾಯಂಕಾಲ 7:45ರಿಂದ 8:30ರವರೆಗೆ ತುಲಾ ಲಗ್ನ ಸಮಯವಿದೆ. ಹಾಗಾಗಿ ಈ ಸಂದರ್ಭದಲ್ಲಿ ಪೂಜಿಸುವುದು ಉತ್ತಮ. ‌

ADVERTISEMENT

ಅಕ್ಟೋಬರ್ 21ರ ಮಂಗಳವಾರ ಬೆಳಿಗ್ಗೆ 5 ರಿಂದ 5.30ರವರೆಗೆ ಕನ್ಯಾ ಲಗ್ನ ಅಥವಾ ಬೆಳಿಗ್ಗೆ 8.30ರಿಂದ 9 ರವರೆಗೆ ವೃಶ್ಚಿಕ ಲಗ್ನದಲ್ಲಿ ಪೂಜೆ ಮಾಡಿದರೆ ಶುಭವಿದೆ. ಈ ಲಗ್ನಗಳಲ್ಲಿ ಧನಲಕ್ಷ್ಮಿ ಪೂಜೆಯನ್ನು ಮಾಡುವುದು. ವಾಹನ ಇತ್ಯಾದಿಗಳನ್ನು ಪೂಜೆ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.