ತಾಜ್‌ಮಹಲ್
ನವದೆಹಲಿ: ‘ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ನೋಡಲು ಬರುವ ಪ್ರವಾಸಿಗರಿಂದ ಭಾರತೀಯ ಪುರಾತತ್ವ ಇಲಾಖೆಗೆ ಅತಿ ಹೆಚ್ಚು ವರಮಾನ ಸಂಗ್ರಹವಾಗುತ್ತಿದೆ’ ಎಂದು ಸರ್ಕಾರ ದಾಖಲೆ ಬಿಡುಗಡೆ ಮಾಡಿದೆ.
ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿ, ‘ಕಳೆದ ಐದು ವರ್ಷಗಳಲ್ಲಿ ₹297 ಕೋಟಿ ಆದಾಯ ಸಂಗ್ರಹವಾಗಿದೆ’ ಎಂದಿದ್ದಾರೆ.
2023–24ರಲ್ಲಿ ಖುತುಬ್ ಮಿನಾರ್ ಮತ್ತು ದೆಹಲಿಯ ಕೆಂಪು ಕೋಟಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದವು. ಇವುಗಳಿಂದ ಕ್ರಮವಾಗಿ ₹23.80 ಕೋಟಿ ಹಾಗೂ ₹18.08 ಕೋಟಿ ಸಂಗ್ರಹವಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ತಾಜ್ ಮಹಲ್ ಅತಿ ಹೆಚ್ಚು ಆದಾಯ ಗಳಿಸಿದ ಸ್ಮಾರಕವಾಗಿದೆ’ ಎಂದಿದ್ದಾರೆ.
17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಶಹ ಜಹಾನ್ ತಾಜ್ ಮಹಲ್ ನಿರ್ಮಿಸಿದರು. ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡಾ ಸ್ಥಾನ ಪಡೆದಿದೆ.
ಇವುಗಳೊಂದಿಗೆ ತಮಿಳುನಾಡಿನ ಮಮ್ಮಲಪುರಂ, ಕೊನಾರ್ಕ್‌ನ ಸೂರ್ಯ ದೇವಾಲಯಗಳಿಗೂ ಪ್ರವಾಸಿಗರು ಭೇಟಿ ನೀಡಿದ್ದು ಹೆಚ್ಚು ಎಂದಿದ್ದಾರೆ.
ವರ್ಷ; ಸ್ಮಾರಕ ; ಆದಾಯ (₹ಕೋಟಿಗಳಲ್ಲಿ)
2020–2024 ; ತಾಜ್‌ಮಹಲ್ ; ₹297
2023–24; ದೆಹಲಿಯ ಕುತುಬ್‌ಮಿನಾರ್ ; ₹23.80
2023–24 ; ದೆಹಲಿಯ ಕೆಂಪುಕೋಟೆ ; ₹18.08
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.