ನವದೆಹಲಿ: ಚಿಕಾಗೊದಿಂದ ದೆಹಲಿಗೆ ಬರುವಏರ್ ಇಂಡಿಯಾ ವಿಮಾನದಲ್ಲಿ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ದರ ಪಡೆಯಲಾಗುತ್ತಿದೆ ಬಗ್ಗೆ ಪ್ರಯಾಣಿಕರೊಬ್ಬರು ಜಗಳ ಮಾಡುತ್ತಿರುವ ಮತ್ತುವಿಮಾನದಲ್ಲಿ ಅಂತರ ಕಾಯ್ದಕೊಳ್ಳದಿರುವ ಬಗ್ಗೆ ಆರೋಪಿಸುತ್ತಿರುವವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಆದರೆ ಈ ವಿಡಿಯೊ ಫೇಕ್ ಆಗಿದ್ದು, ಈ ಘಟನೆ ಬೇರೊಂದು ದೇಶದ ವಿಮಾನ ಸಂಸ್ಥೆಯಲ್ಲಿ ನಡೆದಿದೆ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಟ್ವೀಟಿಸಿದೆ.
ಈ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದ ನಾಗರಿಕ ವಿಮಾನಯಾನ ಸಚಿವಾಲಯವು ಆ ವಿಮಾನಏರ್ ಇಂಡಿಯಾ ಅಲ್ಲ. ಅಂದ ಹಾಗೆ ವಿಮಾನದರ ಹೆಚ್ಚಳ ಮಾಡಿಲ್ಲ ಎಂದು ಹೇಳಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೇಕ್ ವಿಡಿಯೊ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.