ADVERTISEMENT

ಚೀನಾದ ಪ್ರತಿ ಮನೆಯಲ್ಲೂ ಕೊರೊನಾ ವೈರಸ್‌ ಇದೆ. ಆದರೆ, ಔಷಧ ತೆಗೆದುಕೊಳ್ಳುತ್ತಿಲ್ಲ!

​ಪ್ರಜಾವಾಣಿ ವಾರ್ತೆ
Published 11 ಮೇ 2020, 5:21 IST
Last Updated 11 ಮೇ 2020, 5:21 IST
   

‘ಚೀನಾದ ಪ್ರತಿ ಮನೆಯಲ್ಲೂ ಕೊರೊನಾ ವೈರಸ್‌ ಇದೆ. ಆದರೆ, ಅಲ್ಲಿಯ ಜನರು ಔಷಧ ಅಥವಾ ಲಸಿಕೆಯನ್ನು ತೆಗೆದುಕೊಳ್ಳುತ್ತಿಲ್ಲ. ಆಸ್ಪತ್ರೆಗೂ ಹೋಗುವುದಿಲ್ಲ. ಬದಲಿಗೆ ಅವರು ಬಿಸಿ ಹಬೆಯನ್ನು ಉಸಿರಾಡುವುದು, ಬಿಸಿನೀರಿನಿಂದ ಬಾಯಿ ಮುಕ್ಕಳಿಸುವುದು, ಹಾಗೂ ಬಿಸಿ ಚಹಾ ಸೇವನೆಯ ಮೂಲಕ ಗುಣಮುಖರಾಗುತ್ತಿದ್ದಾರೆ. ಇವುಗಳನ್ನು ದಿನಕ್ಕೆ ತಲಾ ನಾಲ್ಕುಬಾರಿ ಮಾಡಿದರೆ ನಾಲ್ಕು ದಿನಗಳಲ್ಲಿ ಕೊರೊನಾ ವೈರಸ್‌ ಸಾಯುತ್ತದೆ, ಐದನೇ ದಿನ ನೀವು ಕೊರೊನಾದಿಂದ ಮುಕ್ತರಾಗುತ್ತೀರಿ’ ಎಂಬ ಸಂದೇಶವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಂಥ ಸಂದೇಶಗಳು ಇದಕ್ಕೂ ಹಿಂದೆಯೂ ಹರಿದಾಡಿದ್ದವು. ಆದರೆ ‘ಬಿಸಿ ಹಬೆ ಸೇವನೆಯಿಂದಾಗಲಿ, ಬಿಸಿನೀರಿನಿಂದ ಬಾಯಿ ಮುಕ್ಕಳಿಸುವುದರಿಂದಾಗಲಿ ಕೊರೊನಾ ವೈರಸ್‌ ಸಾಯುತ್ತದೆ ಎನ್ನಲು ವೈಜ್ಞಾನಿಕ ಪುರಾವೆಗಳಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT