
ನವಿಲು
ನವಿಲೊಂದು ತನ್ನ ಕೊಕ್ಕಿನಲ್ಲಿ ಹೂವಿನ ಹಾರ ಹಿಡಿದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ನವಿಲು ದೇವರ ವಿಗ್ರಹಕ್ಕೆ ಹೂವನ್ನು ಅರ್ಪಿಸಿತು ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್‌ಗಳನ್ನು ಇನ್‌ವಿಡ್ ಸಾಧನದೊಂದಿಗೆ ಪ್ರತ್ಯೇಕಿಸಿ, ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಹಲವರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ವಿಡಿಯೊ ಹಂಚಿಕೊಂಡಿರುವುದು ಕಂಡಿತು. ಜತೆಗೆ, ಆಶಿಶ್ ಸಕ್ಸೇನಾ (ash_saxena) ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2025ರ ಡಿ.29ರಂದು ಜಾಲತಾಣಗಳಲ್ಲಿರುವ ವಿಡಿಯೊವನ್ನೇ ಹೋಲುವ ವಿಡಿಯೊ ಹಂಚಿಕೊಂಡಿದ್ದರು. ಅದನ್ನು ಕೃತಕ ಬುದ್ಧಿಮತ್ತೆ (ಎಐ) ಮಾದರಿ ಅನುಸರಿಸಿ ಸೃಷ್ಟಿಸಿದ್ದಾಗಿ ಉಲ್ಲೇಖಿಸಿದ್ದರು. ಅವರು ಎಐ ನೆರವಿನಿಂದ ರೂಪಿಸಲಾದ ಇಂಥ ಹಲವು ವಿಡಿಯೊಗಳನ್ನು ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಮುಂದುವರಿದು, ಎಐ ಪತ್ತೆ ಸಾಧನವಾದ ಹೈವ್ ಮಾಡರೇಷನ್ ಮೂಲಕ ಪರಿಶೀಲಿಸಿದಾಗ ವಿಡಿಯೊ ಎಐನಿಂದ ರೂಪಿಸಿರುವ ಸಾಧ್ಯತೆ ಶೇ 90ರಷ್ಟು ಇದೆ ಎನ್ನುವುದು ತಿಳಿಯಿತು. ಎಐ ವಿಡಿಯೊ ಅನ್ನು ವಾಸ್ತವಿಕ ಎಂದು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.