ADVERTISEMENT

Fact Check: ಅಂಚೆಚೀಟಿ; ಇಂದಿರಾ ಗಾಂಧಿ ಸರ್ಕಾರ ಮುಸ್ಲಿಮರನ್ನು ಓಲೈಕೆ ಮಾಡಿತ್ತೇ?

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 19:31 IST
Last Updated 1 ಮಾರ್ಚ್ 2021, 19:31 IST
   

‘ಕಾಂಗ್ರೆಸ್ ಆರಂಭದ ದಿನದಿಂದಲೂ ಮುಸ್ಲಿಮರನ್ನು ಓಲೈಸುತ್ತಿತ್ತು. ಈಗಲೂ ಮುಸ್ಲಿಮರನ್ನು ಓಲೈಸುತ್ತಿದೆ. 1982ರ ಏಷ್ಯನ್ ಗೇಮ್ಸ್‌ ವೇಳೆ ಇಂದಿರಾ ಗಾಂಧಿ ಸರ್ಕಾರವು ಏಷ್ಯನ್‌ ಗೇಮ್ಸ್‌ನ ಅಂಚೆಚೀಟಿಯನ್ನು ಬಿಡುಗಡೆ ಮಾಡಿತ್ತು. ಗಡ್ಡಧಾರಿ ಮುಸ್ಲಿಂ ಕುಸ್ತಿಪಟು, ಜುಟ್ಟು ಇರುವ ಬ್ರಾಹ್ಮಣ ಕುಸ್ತಿಪಟುವನ್ನು ಎತ್ತಿ ಒಗೆಯುತ್ತಿರುವ ಚಿತ್ರವನ್ನು ಅಂಚೆಚೀಟಿಯಲ್ಲಿ ಬಳಸಲಾಗಿತ್ತು. ಮುಸ್ಲಿಂ ಕುಸ್ತಿಪಟು, ಬ್ರಾಹ್ಮಣ ಕುಸ್ತಿಪಟುವನ್ನು ಸೋಲಿಸುತ್ತಿರುವಂತಹ ಚಿತ್ರವನ್ನು ಬಳಸಿ ಇಂದಿರಾ ಗಾಂಧಿ ಸರ್ಕಾರವು ಮುಸ್ಲಿಮರನ್ನು ಓಲೈಕೆ ಮಾಡಿತ್ತು. ಹಿಂದೂಗಳಿಗೆ ಅವಮಾನ ಮಾಡಿತ್ತು’ ಎಂಬ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದೇ ರೀತಿಯ ಬರಹ ಇರುವ ಟ್ವೀಟ್‌ಗಳನ್ನು ಹಲವರು ಟ್ವೀಟ್ ಮಾಡಿದ್ದಾರೆ. ಅಂಚೆಚೀಟಿಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಈ ಟ್ವೀಟ್‌ಗಳಲ್ಲಿ ಇರುವಂತೆ ಹಿಂದೂಗಳನ್ನು ಅವಮಾನ ಮಾಡುವಂತಹ ಚಿತ್ರವನ್ನು ಅಂಚೆಚೀಟಿಯಲ್ಲಿ ಬಳಸಿಲ್ಲ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಅಂಚೆಚೀಟಿಯಲ್ಲಿ ಇರುವ ಚಿತ್ರದಲ್ಲಿ ಇಬ್ಬರು ಕುಸ್ತಿಪಟುಗಳಿಗೂ ಜುಟ್ಟು ಇದೆ. ಹೀಗಾಗಿ ಇಬ್ಬರ ಧರ್ಮ ಯಾವುದು ಎಂದು ತಿಳಿಯುವುದಿಲ್ಲ. ಜತೆಗೆ ಈ ಚಿತ್ರವನ್ನು ದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿರುವ, ಜಾನಕಿ ಅವರ ಚಿತ್ರದಿಂದ ಸ್ಫೂರ್ತಿ ಪಡೆದು ಚಿತ್ರಿಸಲಾಗಿತ್ತು. ಅಂಚೆಚೀಟಿಯಲ್ಲಿರುವ ಚಿತ್ರವನ್ನು ಕಲಾವಿದ ಎ.ರಾಮಚಂದ್ರನ್ ಅವರು ರಚಿಸಿದ್ದರು ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT