ADVERTISEMENT

ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 16:12 IST
Last Updated 30 ಸೆಪ್ಟೆಂಬರ್ 2019, 16:12 IST
   

ನವದೆಹಲಿ: ಜಗತ್ತು ಕಾಶ್ಮೀರದ ಸಮಸ್ಯೆಗಳತ್ತ ಗಮನ ಹರಿಸಲು ಶುರು ಮಾಡಿದೆ. ಇದು ಪಾಕಿಸ್ತಾನಕ್ಕೆ ಸಿಕ್ಕಿದ ರಾಜತಾಂತ್ರಿಕ ಗೆಲುವು. ಕಾಶ್ಮೀರದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಕಾಶ್ಮೀರದ ದನಿ ಕೇಳಿಸದಂತೆ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದರೂ, ಅಲ್ಲಿನ ಜನರ ದನಿ ಕೇಳಿಸುವಂತೆ ಮಾಡುವುದೇ ನಮ್ಮ ಗುರಿ. ಇವತ್ತಿನ ನ್ಯೂಯಾರ್ಕ್ ಟೈಮ್ಸ್‌ನಲ್ಲಿ...#ImranKhanVoiceOfKashmir ಎಂದು ಪಾಕಿಸ್ತಾನ್ ತೆಹರೀಕ್- ಇ- ಇನ್‌ಸಾಫ್ (ಪಿಟಿಐ)ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮೇಲಿನ ಬರಹ ಶೇರ್ ಆಗಿದೆ.

ತೆಹರೀಕ್- ಇ- ಇನ್‌ಸಾಫ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಪಾಕಿಸ್ತಾನದಪ್ರಧಾನಿ ಇಮ್ರಾನ್ ಖಾನ್. ಈ ಬರಹದೊಂದಿಗೆ ನ್ಯೂಯಾರ್ಕ್ಟೈಮ್ಸ್ ಪತ್ರಿಕೆಯ ಮುಖಪುಟದ ಚಿತ್ರವನ್ನೂ ಟ್ವೀಟಿಸಿದ್ದು, ಈ ಟ್ವೀಟ್ ಈಗ ಡಿಲೀಟ್ ಆಗಿದೆ.

ಕಾಶ್ಮೀರ ವಿಷಯದಲ್ಲಿ ಭಾರತ ಸರ್ಕಾರವನ್ನು ಟೀಕಿಸಿರುವ ಬರಹವಾಗಿದೆ ಅದು. ಆಗಸ್ಟ್ 5ರಿಂದ ಕಾಶ್ಮೀರದ 8 ದಶಲಕ್ಷ ಮಂದಿ ಒಂದು ದಶಲಕ್ಷ ಯೋಧರಿಂದ ಆಕ್ರಮಣಕ್ಕೊಳಗಾಗಿದ್ದಾರೆ. ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಜನಾಂಗೀಯ ಪಕ್ಷಪಾತ ಧೋರಣೆ ಎಂಬುದು ಸ್ಪಷ್ಟ ಎಂಬುದು ಬರಹದಲ್ಲಿದೆ.

ADVERTISEMENT

ಕಾಶ್ಮೀರ ವಿಷಯದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವಿಸ್ತೃತ ವರದಿ ನೀಡಿದ್ದು ಆಗಸ್ಟ್ 5ರ ನಂತರ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಇದರಲ್ಲಿ ಎತ್ತಿ ತೋರಿಸಲಾಗಿದೆ ಎಂದು ಹಲವಾರು ಟ್ವೀಟಿಗರು ಈ ಚಿತ್ರವನ್ನು ಟ್ವೀಟಿಸಿದ್ದರು.

ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಮುಖಪುಟ ಎಂಬ ಬರಹದೊಂದಿಗೆ ವ್ಯಾಪಕವಾಗಿ ಶೇರ್ ಆಗುತ್ತಿರುವ ಕಾಶ್ಮೀರದ ವಿಷಯವಿರುವಚಿತ್ರಮುಖಪುಟ ಸುದ್ದಿ ಅಲ್ಲ. ಅದು ಪ್ರಾಯೋಜಿತ ಬರಹ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಿತ್ರದ ಕೆಳಗೆ ಎಡಭಾಗದಲ್ಲಿ ‘Sponsored by International Humanitarian Foundation' ಎಂದು ಬರೆದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ವೈರಲ್ಆಗಿರುವ ಈ ಪೇಜ್ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ. ಚಿತ್ರದಲ್ಲಿ www.IHF-US.org ಎಂಬ ವೆಬ್‌ಸೈಟ್ ಹೆಸರಿದೆ. ಈ ವೆಬ್‌ಸೈಟ್ ವಿವರಣೆ ಹೀಗಿದೆ. ಅಶಕ್ತರಾದ ಜನರಿಗೆ ಮತ್ತು ಪ್ರವಾಹ, ನೆರೆ, ರೋಗ, ಬಿರುಗಾಳಿ, ಭಯೋತ್ಪಾದನೆ ಮತ್ತು ಯುದ್ಧ ಮೊದಲಾದ ತುರ್ತು ಸಂದರ್ಭಗಳಲ್ಲಿ ಜನರಿಗೆ ಸೇವೆ ಒದಗಿಸುವುದು ನಮ್ಮ ಗುರಿ. ಮಾನವ ಕುಲದ ಉಳಿವಿಗಾಗಿ ನಾವುಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ, ಸ್ಥಳೀಯ ಸರ್ಕಾರ ಮತ್ತು ಎನ್‌ಜಿಒ ಜತೆ ಕೆಲಸ ಮಾಡುತ್ತೇವೆ ಎಂದಿದೆ.

ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಪ್ರಾಯೋಜಿತ ಬರಹ ಮತ್ತು ಮುಖಪುಟ

ಇಂಟರ್‌ನ್ಯಾಷನಲ್ ಹ್ಯುಮಾನಿಟೇರಿಯನ್ ಫೌಂಡೇಷನ್ ಬಗ್ಗೆ ಈ ವೆಬ್‌ಸೈಟ್‌ನಲ್ಲಿ ಮಾಹಿತಿ ಇರುವುದು ಕಡಿಮೆ. ಅದೇ ವೇಳೆ ನೋಂದಣಿಗಾಗಿ ಮತ್ತು ದೇಣಿಗೆ ನೀಡುವುದಕ್ಕಾಗಿ ಇಲ್ಲಿ ಲಿಂಕ್ ಕೊಡಲಾಗಿದೆ.
ಅಂದ ಹಾಗೆ ಸೆಪ್ಟೆಂಬರ್ 28ರಂದು ಪ್ರಕಟವಾದ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟ ಹೀಗಿದೆ. ಅದರಲ್ಲಿಕಾಶ್ಮೀರ ಸುದ್ದಿ ಇರಲಿಲ್ಲ.

2019 ಸೆಪ್ಟೆಂಬರ್ 28ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಮುಖಪುಟ

ಆಗಸ್ಟ್ 10 , 2019ರಲ್ಲಿ ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಕಾಶ್ಮೀರ ವಿಷಯ ಸುದ್ದಿಯಾಗಿತ್ತು.

2019 ಆಗಸ್ಟ್ 10ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಮುಖಪುಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.