ADVERTISEMENT

ಲಡಾಖ್ ಸಂಘರ್ಷದ್ದು ಎಂದು ಹಂಚಲಾದ ಚಿತ್ರ ನೈಜೀರಿಯಾ ಸೈನಿಕರದ್ದು

ಫ್ಯಾಕ್ಟ್‌ಚೆಕ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 19:30 IST
Last Updated 19 ಜೂನ್ 2020, 19:30 IST
ವೈರಲ್ ಆಗಿರುವ ಚಿತ್ರ
ವೈರಲ್ ಆಗಿರುವ ಚಿತ್ರ   

ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಜತೆ ನಡೆದ ಸಂಘರ್ಷದಲ್ಲಿ ಭಾರತದ 35 ಸೈನಿಕರು ಮೃತಪಟ್ಟಿದ್ದಾರೆ. ಭಾರತೀಯ ಸೇನೆಗೆ ಭಾರಿ ಹಾನಿ ಸಂಭವಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರಿ ಅಪ್‌ಡೇಟ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಈ ಸುದ್ದಿಯನ್ನು ಮೊದಲು ಪೋಸ್ಟ್ ಮಾಡಲಾಗಿದೆ. ನೂರಾರು ಸೈನಿಕರ ಶವಗಳನ್ನು ಒಂದೆಡೆ ಸಾಲಾಗಿ ಮಲಗಿಸಿರುವ ಚಿತ್ರವೂ ಈ ಪೋಸ್ಟ್‌ನಲ್ಲಿದೆ. ಈ ಚಿತ್ರವೂ ಫೇಸ್‌ಬುಕ್‌, ಟ್ವಿಟರ್‌ ಮತ್ತು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.

ಆದರೆ, ಈ ಚಿತ್ರಕ್ಕೂ ಲಡಾಖ್‌ನಲ್ಲಿನ ಸಂಘರ್ಷಕ್ಕೂ ಸಂಬಂಧವಿಲ್ಲ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಈ ಚಿತ್ರವನ್ನು ಪರಿಶೀಲಿಸಿದಾಗ, ಅದು ನೈಜೀರಿಯಾಕ್ಕೆ ಸಂಬಂಧಿಸಿದ ಚಿತ್ರ,2015ರದ್ದು ಎಂಬುದು ಪತ್ತೆಯಾಗಿದೆ. ಬೊಕೊಹರಮ್ ಉಗ್ರರ ಜತೆಗಿನ ಕಾದಾಟದಲ್ಲಿ ಮೃತಪಟ್ಟಿದ್ದ 105 ಸೈನಿಕರ ಶವಗಳ ಅಂತ್ಯಕ್ರಿಯೆಯನ್ನು ಅಲ್ಲಿನ ಸೇನೆ ರಹಸ್ಯವಾಗಿ ನಡೆಸಿತ್ತು. ಈ ಚಿತ್ರವನ್ನೇ ತಿರುಚಿ, ಗಾಲ್ವನ್‌ ಸಂಘರ್ಷಕ್ಕೆ ತಳಕು ಹಾಕಿ ಪೋಸ್ಟ್ ಮಾಡಲಾಗಿದೆ. ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT