ADVERTISEMENT

ಫ್ಯಾಕ್ಟ್ ಚೆಕ್: ಬೃಹತ್ ಸಂಖ್ಯೆಯಲ್ಲಿ ಆರ್‌ಸಿಬಿ ಸಂಭ್ರಮಾಚರಣೆ; ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 23:44 IST
Last Updated 11 ಜೂನ್ 2025, 23:44 IST
..
..   

ಬೃಹತ್ ಸಂಖ್ಯೆಯಲ್ಲಿ ಜನ ರಸ್ತೆಗಳಲ್ಲಿ ನೆರೆದು, ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿಜಯ ಸಾಧಿಸಿ ಚೊಚ್ಚಲ ಕಪ್ ಗೆದ್ದ ನಂತರ ಅಭಿಮಾನಿಗಳು ಬೆಂಗಳೂರಿನ ರಸ್ತೆಗಳಲ್ಲಿ ನರ್ತಿಸಿ ಸಂಭ್ರಮಾಚರಣೆ ಮಾಡಿದ ವಿಡಿಯೊ ಇದು ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್‌ಗಳನ್ನು ಇನ್‌ವಿಡ್ ಟೂಲ್ ಹಾಗೂ ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ನಡೆಸಿದಾಗ, ಒಂದೇ ವಿಡಿಯೊ ಅನ್ನು ಹಲವರು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡುಬಂತು. ಜತೆಗೆ, ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ ಮಾಡಿದಾಗ, ಅದು 2024 ಜೂನ್ 30ಕ್ಕೆ ಸಂಬಂಧಿಸಿದ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಂಪರ್ಕ ಕಲ್ಪಿಸಿತು. ಭಾರತ ಕ್ರಿಕೆಟ್ ತಂಡವು 2024ರ ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಪೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಜಯ ಸಾಧಿಸಿದ ಪ್ರಯುಕ್ತ ಅಭಿಮಾನಿಗಳು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಭ್ರಮಾಚರಣೆ ಮಾಡಿದರು ಎಂದು ಉಲ್ಲೇಖಿಸಲಾಗಿತ್ತು. ವಿಡಿಯೊ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಕೆಲವು ಅಂಗಡಿಗಳ ಮುಂದೆ ಮರಾಠಿ ಬೋರ್ಡ್‌ಗಳಿರುವುದೂ ಕಾಣುತ್ತದೆ. ಕೊಲ್ಹಾ‍ಪುರಕ್ಕೆ ಸಂಬಂಧಿಸಿದ ಹಳೆಯ ವಿಡಿಯೊ ಅನ್ನು ಸುಳ್ಳು ಪ್ರತಿಪಾದನೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT