ADVERTISEMENT

ನೆರೆ ಪರಿಹಾರ ಸಿಗದೆ ಆತ್ಮಹತ್ಯೆಗೆ ಶರಣಾದ ರೈತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 4:51 IST
Last Updated 3 ಅಕ್ಟೋಬರ್ 2019, 4:51 IST
ಕೃಷಿಕ ಚಂದ್ರೇಗೌಡ
ಕೃಷಿಕ ಚಂದ್ರೇಗೌಡ   

ಚಿಕ್ಕಮಗಳೂರು: ಪ್ರವಾಹದಿಂದ ಹಾನಿಯಾದ ಬೆಳೆಗೆ ಇನ್ನೂ ಸೂಕ್ತ ಪರಿಹಾರ ಸಿಗದಿದ್ದಕ್ಕೆಕಳಸ ಸಮೀಪದ ಎಸ್‌.ಕೆ.ಮೇಗಲ್ ಗ್ರಾಮದ ಕೃಷಿಕ ಚಂದ್ರೇಗೌಡ ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಕಳೆದ ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ಅವರ ಜಮೀನು ಕೊಚ್ಚಿ ಹೋಗಿತ್ತು. ಸೂಕ್ತ ಪರಿಹಾರ ಸಿಗದೆ ಕಂಗಾಲಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ಎಂದು ಕುಟುಂಬದ ಮೂಲಗಳು ತಿಳಿಸಿವೆ.

60 ವರ್ಷ ವಯಸ್ಸಿನ ಚಂದ್ರೇಗೌಡ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.ಹಂದಿಗೋಡು ಚಂದ್ರೇಗೌಡ ಬುಧವಾರ ರಾತ್ರಿ ಕೀಟನಾಶಕ ಸೇವಿಸಿದ್ದರು. ಅವರ 1 ಎಕರೆ 30 ಗುಂಟೆ ಭತ್ತದ ಗದ್ದೆ ಸಂಪೂರ್ಣ ನಾಶವಾಗಿತ್ತು. ಒಂದು ಎಕರೆ ಕಾಫಿ ತೋಟ ಕೂಡ ಅತಿವೃಷ್ಟಿಯಿಂದಾಗಿ ಹಾನಿಗೆ ಒಳಗಾಗಿತು. ಇದರಿಂದ ಬೇಸತ್ತಿದ್ದ ಅವರು ಕೀಟನಾಶಕ ಸೇವಿಸಿದ್ದರು. ಕಳಸ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.