ADVERTISEMENT

ತ್ರಿಪುರಾ: 12 ಬಾಂಗ್ಲಾ ನುಸುಳುಕೋರರ ಬಂಧನ

ಪಿಟಿಐ
Published 4 ಆಗಸ್ಟ್ 2024, 15:51 IST
Last Updated 4 ಆಗಸ್ಟ್ 2024, 15:51 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಅಗರ್ತಲಾ: ‘ಸೂಕ್ತ ದಾಖಲೆಗಳಲ್ಲಿದೆ ಮೂವರು ಮಹಿಳೆಯರು ಸೇರಿದಂತೆ 12 ಬಾಂಗ್ಲಾದೇಶದ ನಾಗರಿಕರು ತ್ರಿಪುರಾ ಮೂಲಕ ಭಾರತ ಪ್ರವೇಶಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಈ 12 ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.

‘ಬಾಂಗ್ಲಾದೇಶದ ಪ್ರಜೆಗಳು ತ್ರಿಪುರಾದಲ್ಲಿರುವುದು ಗುಪ್ತಚರ ಮಾಹಿತಿಗಳಿಂದ ತಿಳಿಯಿತು. ಬಿಎಸ್‌ಎಫ್‌ ಸಹಕಾರದೊಂದಿಗೆ ಆ ಎಲ್ಲರನ್ನೂ ಶನಿವಾರ ರಾತ್ರಿ ವೇಳೆಗೆ ಬಂಧಿಸಲಾಗಿದೆ. ದಾಖಲೆಗಳಿಲ್ಲದೆಯೇ ಭಾರತವನ್ನು ಪ್ರವೇಶಿಸಿರುವುದಾಗಿ ತನಿಖೆ ವೇಳೆ 12 ಮಂದಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಗಡಿ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಗಡಿ ಪ್ರದೇಶಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ. ಅಕ್ರಮವಾಗಿ ಭಾರತದ ಒಳಗೆ ನುಸುಳುವವರನ್ನು ಪತ್ತೆ ಮಾಡುವ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.