ಮಾವೋವಾದಿಗಳು (ಸಾಂಕೇತಿಕ ಚಿತ್ರ)
ರಾಂಚಿ: ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗಬೂಂ ಜಿಲ್ಲೆಯಲ್ಲಿ ಹನ್ನೆರಡು ನಕ್ಸಲರು ಗುರುವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಾವೋವಾದಿಗಳು ಸಾರಾಂಡ ಮತ್ತು ಕೊಲ್ಹಾನ್ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಭದ್ರತಾ ಸಿಬ್ಬಂದಿಯ ಮುಂದೆ ಶರಣಾಗಿದ್ದಾರೆ.
ಇವರ ಬಗ್ಗೆ ಸುಳಿವು ಅಥವಾ ಹಿಡಿದು ಕೊಟ್ಟವರಿಗೆ ಸರ್ಕಾರ ₹ 1ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು.
ಪಶ್ಚಿಮ ಸಿಂಗಬೂಂ ಜಿಲ್ಲೆ ನಕ್ಸಲ್ ಪೀಡಿತ ಜಿಲ್ಲೆ ಎಂದೇ ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.