ADVERTISEMENT

ಸಿಕ್ಕಿಂನಲ್ಲಿ ಭೂಕುಸಿತ: 28 ಜನರು, 20 ಸೈನಿಕರ ಸ್ಥಳಾಂತರ

ಪಿಟಿಐ
Published 8 ಜೂನ್ 2025, 13:06 IST
Last Updated 8 ಜೂನ್ 2025, 13:06 IST
<div class="paragraphs"><p>ಹೆಲಿಕಾಪ್ಟರ್‌ ಮೂಲಕ ಜನರ ಸ್ಥಳಾಂತರ</p></div>

ಹೆಲಿಕಾಪ್ಟರ್‌ ಮೂಲಕ ಜನರ ಸ್ಥಳಾಂತರ

   

ಪಿಟಿಐ ಚಿತ್ರ

ಗ್ಯಾಂಗ್ಟಕ್‌: ಭಾರಿ ಮಳೆಯಿಂದ ಉಂಟಾದ ಹಲವು ಭೂಕುಸಿತಗಳಿಂದಾಗಿ, ರಸ್ತೆ ಸಂಪರ್ಕ ಕಡಿತಗೊಂಡಿರುವ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿದ್ದ 28 ಜನರು ಮತ್ತು 20 ಸೈನಿಕರನ್ನು ಭಾನುವಾರ ಸ್ಥಳಾಂತರಿಸಲಾಗಿದೆ.

ADVERTISEMENT

ಸ್ಥಳೀಯರು ಸೇರಿದಂತೆ ಟ್ಯಾಕ್ಸಿ ಚಾಲಕರು ಮತ್ತು ಚಾಟೆನ್‌ನಲ್ಲಿ ನೆಲಸಿದ್ದ ಸರ್ಕಾರಿ ಅಧಿಕಾರಿಗಳನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್‌ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೂವರು ಅಪ್ರಾಪ್ತರು ಸೇರಿದಂತೆ 28 ಜನರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಇವರೆಲ್ಲರೂ ಸುರಕ್ಷಿತವಾಗಿದ್ದಾರೆ. ಹೆಲಿಕಾಪ್ಟರ್‌ ಬಳಸಿ ಎರಡು ಸುತ್ತಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಮೊದಲ ಸುತ್ತಿನಲ್ಲಿ ನಾಗರಿಕರು ಮತ್ತು ಎರಡನೇ ಸುತ್ತಿನಲ್ಲಿ ಸೈನಿಕರನ್ನು ಸ್ಥಳಾಂತರ ಮಾಡಲಾಯಿತು ’ ಎಂದು ಮಾಹಿತಿ ನೀಡಿದ್ದಾರೆ.

‘ನೈಸರ್ಗಿಕ ವಿಕೋಪದಲ್ಲಿ ಸಿಲುಕಿರುವ ಎಲ್ಲರನ್ನೂ ರಕ್ಷಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.