ADVERTISEMENT

ಇಂಫಾಲ | ಪ್ರತ್ಯೇಕ ಕಾರ್ಯಾಚರಣೆ: ಮೂವರು ಉಗ್ರರ ಬಂಧನ

ಪಿಟಿಐ
Published 12 ಫೆಬ್ರುವರಿ 2025, 13:00 IST
Last Updated 12 ಫೆಬ್ರುವರಿ 2025, 13:00 IST
<div class="paragraphs"><p>ಬಂಧನ</p></div>

ಬಂಧನ

   

ಪ್ರಾತಿನಿಧಿಕ ಚಿತ್ರ

ಇಂಫಾಲ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮಣಿಪುರದ ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಸುಲಿಗೆ ಕೃತ್ಯದಲ್ಲಿ ತೊಡಗಿದ್ದ ಮೂವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಂಧಿತರು ನಿಷೇಧಿತ ಪ್ರಿಪಾಕ್‌ ಪ್ರೊ ಸಂಘಟನೆಯ ಸದಸ್ಯರು. ಇವರನ್ನು ನಾಮ್‌ದುಲೊಂಗ್ ಖುಮಾನ್ ಲಂಪಕ್‌ ಕ್ರೀಡಾಂಗಣದ ರಸ್ತೆಯಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಪ್ರಿಪಾಕ್‌ ಪ್ರೊ ಸಂಘಟನೆಯ ಕರಪತ್ರ ಮತ್ತು ಇತರೆ ಪರಿಕರಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಪ್ರಕರಣದಲ್ಲಿ ನಿಷೇಧಿತ ಕಾಂಗ್ಲೀಪಾಕ್‌ ಕಮ್ಯುನಿಸ್ಟ್‌ ಪಾರ್ಟಿ ಸದಸ್ಯನೊಬ್ಬನನ್ನು ಲಾಂಗೋಲ್‌ ಗೇಮ್ ಗ್ರಾಮದಲ್ಲಿ ಬಂಧಿಸಲಾಗಿದೆ. 

ಬಂಧಿತನಿಂದ ಎರಡು ರೇಡಿಯೊ ಸೆಟ್, ನಾಲ್ಕು ಚಾರ್ಜರ್‌ಗಳು, ಬ್ಯಾಗ್‌, 58 ಖಾಲಿ ಶೆಲ್‌ಗಳಿದ್ದ ಎರಡು ಅಶ್ರುವಾಯು ಶೆಲ್‌ಗಳ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.