ADVERTISEMENT

ಕತ್ತನ್ನು ಬಿಗಿಯಾಗಿ ಕಚ್ಚಿದ ತಾಯಿ ಹುಲಿ: ಮೂರು ಮರಿಗಳು ಸಾವು

ಪಿಟಿಐ
Published 8 ಡಿಸೆಂಬರ್ 2024, 5:29 IST
Last Updated 8 ಡಿಸೆಂಬರ್ 2024, 5:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಲ್ಕತ್ತ: ಹುಲಿಯೊಂದು ತನ್ನ ಮರಿಗಳನ್ನು ಬಾಯಲ್ಲಿ ಕಚ್ಚಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವಾಗ ಆಕಸ್ಮಿಕವಾಗಿ ಮೂರು ಮರಿಗಳು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಈ ಕುರಿತು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಕಾ ಎನ್ನುವ ಹುಲಿ ಕಳೆದ ವಾರ ಮೂರು ಮರಿಗಳಿಗೆ ಜನ್ಮ ನೀಡಿತ್ತು. ರಾತ್ರಿ ವೇಳೆ ಮರಿಗಳ ಕುತ್ತಿಗೆಯನ್ನು ಕಚ್ಚಿಕೊಂಡು ಹೋಗುವಾಗ ಶ್ವಾಸನಾಳಗಳ ಮೇಲೆ ಬಿಗಿಹಿಡಿತ ಸಾಧಿಸಿದ ಪರಿಣಾಮ ಮರಿಗಳು ಮೃತಪಟ್ಟಿವೆ ಎಂದು ಮೃಗಾಲಯ ಪ್ರಾಧಿಕಾರದ ಕಾರ್ಯದರ್ಶಿ ಸೌರವ್‌ ಚೌಧರಿ ತಿಳಿಸಿದ್ದಾರೆ.

ADVERTISEMENT

ಘಟನೆಯಿಂದಾಗಿ ಹುಲಿ ದುಃಖದಲ್ಲಿರುವುದು ಅದರ ವರ್ತನೆಯಲ್ಲಿ ವ್ಯಕ್ತವಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.