ಹೆಲಿಕಾಪ್ಟರ್ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು
– ಪಿಟಿಐ ಚಿತ್ರ
ಗ್ಯಾಂಗ್ಟಕ್: ಭೂ ಕುಸಿತದಿಂದಾಗಿ ಸಿಕ್ಕಿಂನ ಛಟೆನ್‌ನಲ್ಲಿ ಸಿಲುಕಿದ್ದ 44 ಪ್ರವಾಸಿಗರನ್ನು ಶುಕ್ರವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
44 ಜನರನ್ನು ಹೆಲಿಕಾಪ್ಟರ್ ಮೂಲಕ ಪಕ್ಯೋಂಗ್‌ನ ವಿಮಾನ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಬಸ್ ಮೂಲಕ ಗ್ಯಾಂಗ್ಟಕ್‌ಗೆ ಕರೆತರಲಾಯಿತು. ಅವರಲ್ಲಿ 17 ಮಂದಿ ಸ್ಥಳೀಯ ನಿವಾಸಿಗಳು. ಅಲ್ಲಿ ಸಿಲುಕಿದ್ದ ಎಲ್ಲ ಪ್ರವಾಸಿಗರು ಹೊರಬಂದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛಟೆನ್‌ನಲ್ಲಿ ಒಟ್ಟು 64 ಮಂದಿ ಸಿಲುಕಿದ್ದಾರೆ ಎಂದು ರಾಜ್ಯ ಸರ್ಕಾರವು ಈ ಹಿಂದೆ ತಿಳಿಸಿತ್ತು. ಸ್ಥಳೀಯ ನಿವಾಸಿಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛಟೆನ್‌ನಲ್ಲಿನ ಸೇನಾ ಶಿಬಿರದ ಬಳಿ ಜೂನ್ 1ರಂದು ಸಂಭವಿಸಿದ ಭೂಕುಸಿತದಲ್ಲಿ ಮೂವರು ಯೋಧರು ಮೃತಪಟ್ಟಿದ್ದರು. ನಾಪತ್ತೆಯಾಗಿರುವ ಆರು ಮಂದಿ ಯೋಧರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.