ADVERTISEMENT

57 ಹೊಸ ಕೇಂದ್ರೀಯ ವಿದ್ಯಾಲಯಗಳ ಆರಂಭಕ್ಕೆ ಕೇಂದ್ರ ಅಸ್ತು

ಪಿಟಿಐ
Published 1 ಅಕ್ಟೋಬರ್ 2025, 14:26 IST
Last Updated 1 ಅಕ್ಟೋಬರ್ 2025, 14:26 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

(ಸಂಗ್ರಹ ಚಿತ್ರ) 

ನವದೆಹಲಿ: ಕೇಂದ್ರದ ಸಚಿವ ಸಂಪುಟ ಸಭೆಯು 57 ಹೊಸ ಕೇಂದ್ರೀಯ ವಿದ್ಯಾಲಯಗಳ(ಕೆ.ವಿ) ಆರಂಭಕ್ಕೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ADVERTISEMENT

ಇದರಿಂದ 86,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

57 ಹೊಸ ಕೆ.ವಿ.ಗಳಲ್ಲಿ ಏಳನ್ನು ಕೇಂದ್ರ ಗೃಹ ಸಚಿವಾಲಯವು ಪ್ರಾಯೋಜಿಸಿದರೆ, ಉಳಿದವುಗಳನ್ನು ರಾಜ್ಯ ಸರ್ಕಾರಗಳು ಪ್ರಾಯೋಜಿಸುತ್ತವೆ. ಹೊಸದಾಗಿ ಅನುಮೋದಿಸಲಾದ ಇಪ್ಪತ್ತು ಕೆ.ವಿ.ಗಳನ್ನು ಗಮನಾರ್ಹ ಸಂಖ್ಯೆಯ ಕೇಂದ್ರ ಸರ್ಕಾರಿ ನೌಕರರಿದ್ದರೂ ಪ್ರಸ್ತುತ ಯಾವುದೇ ಕೆ.ವಿ. ಇಲ್ಲದ ಜಿಲ್ಲೆಗಳಲ್ಲಿ ತೆರೆಯಲು ಉದ್ದೇಶಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು, ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ದೇಶದಾದ್ಯಂತ ನಾಗರಿಕ ವಲಯದ ಅಡಿಯಲ್ಲಿ 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮೋದನೆ ನೀಡಿದೆ ಎಂದು ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

2026-27ರಿಂದ ಒಂಬತ್ತು ವರ್ಷಗಳ ಅವಧಿಯಲ್ಲಿ 57 ಹೊಸ ಕೆ.ವಿ.ಗಳ ಸ್ಥಾಪನೆಗೆ ಒಟ್ಟು ಅಂದಾಜು ಹಣದ ಅವಶ್ಯಕತೆ ₹5862.55 ಕೋಟಿಗಳಾಗಿದ್ದು, ಇದರಲ್ಲಿ ₹2585.52 ಕೋಟಿ ಬಂಡವಾಳ ವೆಚ್ಚ ಮತ್ತು ₹3277.03 ಕೋಟಿ ಕಾರ್ಯಾಚರಣೆಯ ವೆಚ್ಚ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.