ADVERTISEMENT

ಉಕ್ರೇನ್‌ನಿಂದ ನಾಳೆ ದೆಹಲಿಗೆ ಬರಲಿವೆ ಭಾರತೀಯರನ್ನು ಹೊತ್ತ 7 ವಿಮಾನಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2022, 10:36 IST
Last Updated 1 ಮಾರ್ಚ್ 2022, 10:36 IST
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ   

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ‘ಆಪರೇಷನ್ ಗಂಗಾ’ ಹೆಸರಿನಲ್ಲಿ ವಾಪಸ್ ಕರೆತರಲಾಗುತ್ತಿದ್ದು,ನಾಳೆ ಏಳು ವಿಶೇಷ ವಿಮಾನಗಳು ದೆಹಲಿಗೆ ಬಂದಿಳಿಯಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.

ಈವರೆಗೆ 9 ವಿಮಾನಗಳಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಾಗಿದೆ.

ಇಂಡಿಗೊ ಏರ್‌ಲೈನ್ಸ್‌ನ ಮೊದಲ ವಿಮಾನ ಮಂಗಳವಾರ ಸಂಜೆ ಹಂಗೇರಿರಾಜಧಾನಿ ಬುಡಾಪೆಸ್ಟ್‌ನಿಂದ ಟೇಕಾಫ್ ಆಗಲಿದ್ದು, ನಾಳೆ ಬೆಳಿಗ್ಗೆ 7:20 ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.

ADVERTISEMENT

ಇಂಡಿಗೊ ವಿಮಾನವು 216, ಏರ್ ಇಂಡಿಯಾ 250, ಏರ್ ಇಂಡಿಯಾ ಎಕ್ಸ್‌ಪ್ರೆಸ್ 180 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ.

ಉಕ್ರೇನ್‌ನಲ್ಲಿ ಸಿಲುಕಿರುವವರನ್ನು ಕರೆತರುವುದಕ್ಕಾಗಿ ಕೇಂದ್ರ ಸರ್ಕಾರ ದೇಶೀಯ ವಿವಿಧ ವಿಮಾನಯಾನ ಸಂಸ್ಥೆಗಳ 20 ವಿಮಾನಗಳನ್ನು ನಿಯೋಜನೆ ಮಾಡಿದೆ.

ಈಗಾಗಲೇ ಏರ್ ಇಂಡಿಯಾ, ಸ್ಪೈಸ್‌ಜೆಟ್, ಇಂಡಿಗೊ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಶೇಷ ವಿಮಾನಗಳನ್ನು ರುಮೇನಿಯಾ, ಹಂಗೆರಿಗೆ ಕಳುಹಿಸಲಾಗಿದೆ. ಈ ವಿಮಾನಗಳು ಬುಕಾರೆಸ್ಟ್ ಹಾಗೂ ಬುಡಾಪೆಸ್ಟ್‌ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.