
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಮುಂಬರುವ ದಿನಗಳಲ್ಲಿ ಆಧಾರ್‌ನ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ. ವಿಶೇಷವಾಗಿ ಮೊಬೈಲ್ ಮೂಲಕವೇ ಅಗತ್ಯ ನವೀಕರಣ (Update) ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ತಿಳಿಸಿರುವಂತೆ ಒಟಿಪಿ ಹಾಗೂ ಮುಖ ದೃಢೀಕರಣವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸಬಹುದಾಗಿದೆ. ಈ ಮೊದಲು ಮೊಬೈಲ್ ಸಂಖ್ಯೆ ಬದಲಿಸಲು ಗ್ರಾಮ ಒನ್ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಈಗ ನೀಡಿರುವ ಉಪಕ್ರಮದಿಂದಾಗಿ ಆಧಾರ್ ಅಪ್‌ಡೇಟ್ ಅನ್ನು ಸುಲಭವಾಗಿ ಮೊಬೈಲ್‌ನಲ್ಲಿಯೇ ಮಾಡಬಹುದು. ಇದರಿಂದ ಸಮಯದ ಜೊತೆಗೆ ಹಣವನ್ನು ಉಳಿತಾಯ ಮಾಡಬಹುದು.
ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ. ಇದು ಸುರಕ್ಷಿತ ಮತ್ತು ಅನುಕೂಲಕರ ಆಧಾರ್ ನಿರ್ವಹಣೆಯನ್ನು ಹೊಂದಿದೆ. ಸಾರ್ವಜನಿಕರ ವೈಯಕ್ತಿಕ ಡೇಟಾ ಕೂಡಾ ಸುರಕ್ಷಿತವಾಗಿರಲಿದೆ ಎಂದು UIDAI ತಿಳಿಸಿದೆ. ಈ ಯೋಜನೆ ’ನನ್ನ ಆಧಾರ್ ನನ್ನ ಗುರುತು’ ಅಭಿಯಾನದಡಿ ಜಾರಿಯಾಗಿದೆ.
ಆ್ಯಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಆಂಡ್ರಾಯ್ಡ್: https://tinyurl.com/5hex3yay
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.