ADVERTISEMENT

ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಗೆ ಭಯವೇ?: ಎಎಪಿ

ಪಿಟಿಐ
Published 24 ಡಿಸೆಂಬರ್ 2022, 13:23 IST
Last Updated 24 ಡಿಸೆಂಬರ್ 2022, 13:23 IST
   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ)ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷವು (ಎಎಪಿ) ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸವಾಲು ಹಾಕಿದೆ.

ಎಎಪಿ ನಾಯಕ ಹಾಗೂ ರಾಜ್ಯಸಭೆ ಸದಸ್ಯ ರಾಘವ್‌ ಚಡ್ಡಾ ಅವರು ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ.

ಮೇಯರ್ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ. ಆದರೆ, ಆ ಪಕ್ಷವು (ಬಿಜೆಪಿ) ಸ್ವತಂತ್ರ ಅಭ್ಯರ್ಥಿಯನ್ನುಬೆಂಬಲಿಸುತ್ತಿದೆ ಎಂಬುದು ತಿಳಿದುಬಂದಿದೆ. ಮೇಯರ್ ಚುನಾವಣೆಗೆ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಅವರಿಗಿರುವ ಭಯವೇನು? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಮೇಯರ್‌, ಉಪಮೇಯರ್‌ ಸೇರಿದಂತೆಎಂಸಿಡಿಯ ವಿವಿಧ ಸ್ಥಾನಗಳಿಗೆ ಆರು ಅಭ್ಯರ್ಥಿಗಳ ಹೆಸರನ್ನು ಎಎಪಿಯು ಶುಕ್ರವಾರ ಅಂತಿಮಗೊಳಿಸಿದೆ.ಮೇಯರ್‌ ಸ್ಥಾನಕ್ಕೆ ಶೆಲ್ಲಿ ಒಬೆರಾಯ್‌, ಉಪಮೇಯರ್‌ ಸ್ಥಾನಕ್ಕೆ ಮಹಮ್ಮದ್‌ ಇಕ್ಬಾಲ್‌ ಎಎಪಿ ಅಭ್ಯರ್ಥಿಗಳಾಗಿದ್ದಾರೆ.

ಎಂಸಿಡಿಗೆ ಮೇಯರ್‌ ಆಯ್ಕೆ ಜನವರಿ 6ರಂದು ನಡೆಯಲಿದೆ.

ಎಂಸಿಡಿಯ ಒಟ್ಟು 250 ವಾರ್ಡ್‌ಗಳಿಗೆಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಎಪಿ 134 ಸ್ಥಾನ ಗೆದ್ದಿದೆ. ಬಿಜೆಪಿ 104 ಕಡೆ ಜಯ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.