ಟಿವಿಕೆ ನಾಯಕ ವಿಜಯ್
ಚೆನ್ನೈ: ಫೆಬ್ರುವರಿ 5ರಂದು ನಿಗದಿಯಾಗಿರುವ ತಮಿಳುನಾಡು ಈರೋಡ್ ಪೂರ್ವ ವಿಧಾನಸಭೆ ಉಪ ಚುನಾವಣೆಗೆ ನಟ ವಿಜಯ್ ಅವರ ಟಿವಿಕೆ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಣೆಯಾಗಿದೆ.
ಶುಕ್ರವಾರ ಟಿವಿಕೆ ಪಕ್ಷದ (Tamizhaga Vetri Kazhagam) ಎನ್. ಆನಂದ ಅವರು ಈ ಘೋಷಣೆ ಮಾಡಿದರು.
ಈ ಕ್ಷೇತ್ರ ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ಇವಿಕೆಎಸ್ ಇಳಾಂಗೋವನ್ ಅವರ ನಿಧನದಿಂದ ಉಪ ಚುನಾವಣೆ ಘೋಷಣೆಯಾಗಿದೆ.
ಉಪ ಚುನಾವಣೆಯಲ್ಲಿ ಸಹಜವಾಗಿ ಆಡಳಿತಾಡೂಢ ಪಕ್ಷಗಳು ಗೆಲ್ಲುತ್ತವೆ. ಆದರೆ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಎಲ್ಲ ತಯಾರಿ ಮಾಡಿಕೊಂಡಿದೆ. ಹೀಗಾಗಿ ನಾವು ಮುಂಬರುವ (2026) ಸಾರ್ವತ್ರಿಕ ಚುನಾವಣೆಯಲ್ಲಿ ಡಿಎಂಕೆಯನ್ನು ಮನೆಗೆ ಕಳುಹಿಸುವ ಕೆಲಸದಲ್ಲಿ ತಲ್ಲೀನರಾಗುತ್ತೇವೆ. ಈ ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಆನಂದ ಹೇಳಿದ್ದಾರೆ
ಈರೋಡ್ ಪೂರ್ವ ವಿಧಾನಸಭೆ ಉಪ ಚುನಾವಣೆಗೆ ಡಿಎಂಕೆ ಮೈತ್ರಿ ಅಭ್ಯರ್ಥಿಯಾಗಿ ವಿ.ಸಿ. ಚಂದ್ರಕುಮಾರ್ ಎನ್ನುವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ, ಎಐಎಡಿಎಂಕೆ ಸಹ ಈ ಉಪ ಚುನಾವಣೆಯನ್ನು ಬಹಿಷ್ಕರಿಸಿವೆ. ಮುಂದಿನ ವರ್ಷಾಂತ್ಯಕ್ಕೆ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ.
ಇತ್ತೀಚೆಗೆ ದಳಪತಿ ಖ್ಯಾತಿಯ ನಟ ವಿಜಯ್ ಅವರು Tamizhaga Vetri Kazhagam ಪಕ್ಷವನ್ನು ಘೋಷಣೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.