ADVERTISEMENT

ಅದಾನಿ ಕೊಟ್ಟ ಅಂತಹ ಪ್ರಸ್ತಾವನೆಯನ್ನು ಯಾವ ಸಿಎಂ ತಿರಸ್ಕರಿಸುತ್ತಾರೆ? ರಾಹುಲ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 10:17 IST
Last Updated 8 ಅಕ್ಟೋಬರ್ 2022, 10:17 IST
ರಾಹುಲ್‌ ಗಾಂಧಿ, ಗೌತಮ್‌ ಅದಾನಿ ಮತ್ತು ಅಶೋಕ್‌ ಗೆಹಲೋತ್‌
ರಾಹುಲ್‌ ಗಾಂಧಿ, ಗೌತಮ್‌ ಅದಾನಿ ಮತ್ತು ಅಶೋಕ್‌ ಗೆಹಲೋತ್‌    

ಬೆಂಗಳೂರು: ಅದಾನಿ ರಾಜಸ್ಥಾನಕ್ಕೆ ₹60,000 ಕೋಟಿಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅಂತಹ ಪ್ರಸ್ತಾಪವನ್ನು ಯಾವುದೇ ಸಿಎಂ ನಿರಾಕರಿಸುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ಹೇಳಿದ್ದಾರೆ.

ಭಾರತ ಜೋಡಿಸಿ ಯಾತ್ರೆ ತುಮಕೂರು ತಲುಪಿದೆ. ಯಾತ್ರೆಯ ನಡುವೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅದಾನಿ ರಾಜಸ್ಥಾನಕ್ಕೆ ₹60,000 ಕೋಟಿಗಳ ಪ್ರಸ್ತಾವನೆಯನ್ನು ನೀಡಿದ್ದರು. ಅಂತಹ ಪ್ರಸ್ತಾಪವನ್ನು ಯಾವುದೇ ಸಿಎಂ ನಿರಾಕರಿಸುವುದಿಲ್ಲ. ರಾಜಸ್ಥಾನ ಸಿಎಂ ಅಶೋಕ್‌ ಗೆಹಲೋತ್‌ ಅದಾನಿ ಅವರಿಗೆ ಯಾವುದೇ ಆದ್ಯತೆ ನೀಡಿಲ್ಲ. ಅಥವಾ ಅವರ ವ್ಯವಹಾರಕ್ಕೆ ನೆರವಾಗಲು ತಮ್ಮ ರಾಜಕೀಯ ಶಕ್ತಿಯನ್ನು ಬಳಸಿಕೊಂಡಿಲ್ಲ’ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಭಾರತದ ಪ್ರತಿಯೊಂದು ವ್ಯವಹಾರದಲ್ಲೂ ಇಬ್ಬರಿಂದ ಮೂವರು ಏಕಸ್ವಾಮ್ಯ ಸಾಧಿಸಲು ಬಿಜೆಪಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಅಂಶವನ್ನು ನಾನು ವಿರೋಧಿಸುತ್ತೇನೆ. ಬಂಡವಾಳದ ಕೇಂದ್ರೀಕರಣವನ್ನೂ ನಾನು ಆಕ್ಷೇಪಿಸುತ್ತೇನೆ. ಆದರೆ, ವ್ಯಾಪಾರ ಅಥವಾ ಸಹಕಾರದ ವಿರೋಧಿಯಲ್ಲ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಉದ್ಯಮಿ ಗೌತಮ್ ಅದಾನಿ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ 'ಭಾಯ್' ಎಂದು ಸಂಬೋಧಿಸಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತವರ ಉದ್ಯಮಿ ಮಿತ್ರರ ವಿರುದ್ಧ ಸದಾ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಮುಜುಗರಕ್ಕೊಳಗಾಗಿದೆ.

ಮುಂದಿನ ಐದರಿಂದ ಏಳು ವರ್ಷಗಳಲ್ಲಿ ರಾಜಸ್ಥಾನದಲ್ಲಿ ₹65,000 ಕೋಟಿ ಬೃಹತ್ ಹೂಡಿಕೆ ಮಾಡುವುದಾಗಿ ಅದಾನಿ ಘೋಷಿಸಿದ್ದಾರೆ. ಇದರಲ್ಲಿ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ, 10,000 ಎಂಡಬ್ಲ್ಯು ಸೌರ ವಿದ್ಯುತ್ ಸೌಲಭ್ಯ, ಸಿಮೆಂಟ್ ಘಟಕದ ವಿಸ್ತರಣೆ ಮುಂತಾದ ಯೋಜನೆಗಳು ಸೇರಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.