ADVERTISEMENT

ಮುಸ್ಲಿಮರ ಬಳಿಕ ಹಿಂದುತ್ವ ಬ್ರಿಗೇಡ್‌ನ ಗುರಿ ಕ್ರೈಸ್ತರು: ಚಿದಂಬರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2021, 9:37 IST
Last Updated 29 ಡಿಸೆಂಬರ್ 2021, 9:37 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ಮುಸ್ಲಿಮರ ಬಳಿಕ ಹಿಂದುತ್ವ ಬ್ರಿಗೇಡ್‌ ಕ್ರೈಸ್ತರನ್ನು ಗುರಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬುಧವಾರ ಆರೋಪಿಸಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಮಿಷನರೀಸ್ ಆಫ್ ಚಾರಿಟಿ (ಎಂಒಸಿ) ಖಾತೆ ನವೀಕರಣವನ್ನು ನಿರಾಕರಿಸುವ ಮೂಲಕ ಬಡವರು ಹಾಗೂ ಉತ್ತಮ ಸೇವೆ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯ (ಎನ್‌ಜಿಎ) ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಮುಖ್ಯ ಸುದ್ದಿ ವಾಹಿನಿಗಳು ಈ ಕುರಿತುವರದಿ ಮಾಡದಿರುವುದು ಚಿದಂಬರಂ ಆಕ್ರೋಶಕ್ಕೆ ಕಾರಣವಾಗಿದೆ. ಇದು ನಿಜಕ್ಕೂ ಅವಮಾನಕರ ಎಂದು ಹೇಳಿದ್ದಾರೆ.

ADVERTISEMENT

ಕೋಲ್ಕತ್ತ, ಪಶ್ಚಿಮ ಬಂಗಾಳದಲ್ಲಿ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ವಿದೇಶ ದೇಣಿಗೆ ನಿರಾಕರಿಸುವುದರಿಂದ ಆಶ್ಚರ್ಯಕರವಾದದ್ದೇನೂ ಇಲ್ಲ. ಇದು ಭಾರತದಲ್ಲಿ ಬಡವರು ಹಾಗೂ ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಅವರ ಸ್ಮರಣೆಗೆ ಆದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಮುಖಾಂತರ ವಿದೇಶಿ ದೇಣಿಗೆ ಬಳಕೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.