ಜಾಗತಿಕವಾಗಿ ಜನರ ನಡುವೆ ವಿಮಾನಯಾನ ಈಗ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ವಿಮಾನಗಳಲ್ಲಿ ಸಂಚರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ವಿಮಾನಗಳ ಹಾರಾಟದಲ್ಲೂ ಗಣನೀಯವಾಗಿ ಹೆಚ್ಚಳವಾಗಿದೆ. ಇದರ ನಡುವೆಯೇ, ವಿಮಾನಗಳು ಅಪಘಾತಕ್ಕೀಡಾಗುತ್ತಿರುವುದು ಹೆಚ್ಚುತ್ತಿದೆ. 2023ಕ್ಕೆ ಹೋಲಿಸಿದರೆ, 2024ರಲ್ಲಿ ವಿಮಾನ ಅಪಘಾತಗಳು ಹೆಚ್ಚಾಗಿವೆ ಎಂದು ಐಎಟಿಎ ವಾರ್ಷಿಕ ಸುರಕ್ಷತಾ ವರದಿ–2024 ಹೇಳಿದೆ.
2024ರಲ್ಲಿ ವಿಮಾನ ಅಪಘಾತಗಳು: ಒಂದು ನೋಟ
46–ಸಂಭವಿಸಿದ್ದ ಪ್ರಮುಖ ವಿಮಾನ ಅಪಘಾತಗಳು
9%– 2023ಕ್ಕೆ ಹೋಲಿಸಿದರೆ ಅಪಘಾತದಲ್ಲಿ ಆದ ಹೆಚ್ಚಳ
7–ಪ್ರಯಾಣಿಕರು/ಸಿಬ್ಬಂದಿ ಮೃತಪಟ್ಟ ಅಪಘಾತ ಪ್ರಕರಣಗಳು
244– ಮೃತಪಟ್ಟ ಪ್ರಯಾಣಿಕರು ಮತ್ತು ಸಿಬ್ಬಂದಿ
7 –ವಿಮಾನಗಳ ಅಪಘಾತದಿಂದ ಮೃತಪಟ್ಟ ಇತರರು (ಪ್ರಯಾಣಿಕರು, ಸಿಬ್ಬಂದಿ ಅಲ್ಲದವರು)
0.06– 2024ರಲ್ಲಿ ಪ್ರತಿ 10 ಲಕ್ಷ ವಿಮಾನ ಪ್ರಯಾಣದಲ್ಲಿ (per million sectors) ಇದ್ದ ಸಾವಿನ ಅಪಾಯದ ದರ
0.03– 2023ರಲ್ಲಿ ಪ್ರತಿ 10 ಲಕ್ಷ ವಿಮಾನ ಪ್ರಯಾಣದಲ್ಲಿ ಇದ್ದ ಸಾವಿನ ಅಪಾಯದ ದರ
2024ರಲ್ಲಿ ಪ್ರತಿ 1,81,541 ವಿಮಾನ ಪ್ರಯಾಣಕ್ಕೆ ಒಂದು ಅಪಘಾತ ಸಂಭವಿಸಿದೆ.
ವಿಮಾನ ನಿಯಂತ್ರಣ ಕಳೆದುಕೊಂಡಿದ್ದು
ರನ್ ವೇಗೆ ಆದ ಹಾನಿ
ಆಗಸದಲ್ಲಿ ಪರಸ್ಪರ ಡಿಕ್ಕಿ
ವಿಮಾನದ ಹಿಂಭಾಗ ರನ್‌ವೇಗೆ ಉಜ್ಜಿದ್ದು
ರನ್‌ವೇನಿಂದ ವಿಮಾನಗಳು ಜಾರಿದ್ದು
ಲ್ಯಾಂಡಿಂಗ್ ಗೇರ್ ಸಮಸ್ಯೆ
ರನ್ ವೇಗೆ ಹಾನಿ
ವಿಮಾನವು ರನ್‌ವೇ ಬಿಟ್ಟು ನೆಲ ಸ್ಪರ್ಶ
ವಿಮಾನದ ಒಳಗೆ ಹಾನಿ
ಬಿರುಸು ಇಳಿತ (ಹಾರ್ಡ್ ಲ್ಯಾಂಡಿಂಗ್)
ಆಧಾರ: ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ (ಐಎಟಿಎ) ವಾರ್ಷಿಕ ಸುರಕ್ಷತಾ ವರದಿ–2024, ರಾಯಿಟರ್ಸ್, ಪಿಐಬಿ ಪ್ರಕಟಣೆ ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.