ADVERTISEMENT

8 ವಿಮಾನಗಳ ಹಾರಾಟ ರದ್ದುಪಡಿಸಿದ ಏರ್‌ ಇಂಡಿಯಾ

ಪಿಟಿಐ
Published 20 ಜೂನ್ 2025, 6:16 IST
Last Updated 20 ಜೂನ್ 2025, 6:16 IST
ಏರ್‌ ಇಂಡಿಯಾ ವಿಮಾನ
ಏರ್‌ ಇಂಡಿಯಾ ವಿಮಾನ   

ನವದೆಹಲಿ: ಅಹಮದಾಬಾದ್‌ನಲ್ಲಿ ಸಂಭವಿಸಿದ ದುರಂತದ ಬಳಿಕ ಏರ್‌ ಇಂಡಿಯಾ ವಿಮಾನದ ಹಾರಾಟದಲ್ಲಿ ವ್ಯತ್ಯಯವಾಗಿದೆ. 

ಇಂದು (ಶುಕ್ರವಾರ) ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರಣಗಳಿಂದಾಗಿ 4 ದೇಶೀಯ ಮತ್ತು 4 ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

ಅಂತರರಾಷ್ಟ್ರೀಯ ವಿಮಾನಗಳಾದ ದುಬೈ–ಚೆನ್ನೈ AI906, ದೆಹಲಿ– ಮೆಲ್ಬೋರ್ನ್‌ AI308, ಮೆಲ್ಬೋರ್ನ್‌– ದೆಹಲಿ AI309, ದುಬೈ –ಹೈದರಾಬಾದ್‌ AI2204 ಹಾರಾಟ ರದ್ದುಗೊಂಡಿದೆ. 

ADVERTISEMENT

ದೇಶೀಯ ವಿಮಾನಗಳಾದ ಪುಣೆ– ದೆಹಲಿ AI874, ಅಹಮದಾಬಾದ್‌– ದೆಹಲಿ AI456, ಹೈದರಾಬಾದ್– ಮುಂಬೈ AI-2872, ಚೆನ್ನೈ– ಮುಂಬೈ  AI571 ಹಾರಾಟ ರದ್ದುಗೊಂಡಿದೆ.

ಪ್ರಯಾಣಿಕರಿಗೆ ಟಿಕೆಟ್ ರದ್ದತಿಯ ಹಣವನ್ನು ವಾಪಸ್‌ ನೀಡಲಾಗುವುದು ಅಥವಾ ಪ್ರಯಾಣದ ಟಿಕೆಟ್‌ಅನ್ನು ಉಚಿತವಾಗಿ ಮರುನಿಗದಿ ಮಾಡಿಕೊಡಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದಲ್ಲದೆ, ಚೆನ್ನೈನಿಂದ ಮದುರೈಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ವಾಪಸಾಗಿದೆ. ವಿಮಾನದಲ್ಲಿ 68 ಜನ ಪ್ರಯಾಣಿಕರಿದ್ದರು. ಚೆನ್ನೈನಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.