ಮುಂಬೈ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ 147 ಪ್ರಯಾಣಿಕರು, ಇತರ 19 ಮಂದಿಯ ಕುಟುಂಬಸ್ಥರಿಗೆ ಏರ್ ಇಂಡಿಯಾವು ಮಧ್ಯಂತರ ಪರಿಹಾರದ ಮೊತ್ತವನ್ನು ನೀಡಿದೆ.
ಸಂತ್ರಸ್ತರ ಕುಟುಂಬಸ್ಥರ ಆರ್ಥಿಕ ತುರ್ತು ಪರಿಸ್ಥಿತಿ ನಿರ್ವಹಣೆಗೆ ನೆರವಾಗಲು ಮಧ್ಯಂತರ ಪರಿಹಾರವಾಗಿ ₹25 ಲಕ್ಷವನ್ನು ಏರ್ ಇಂಡಿಯಾ ಒಂದು ತಿಂಗಳ ಹಿಂದೆಯೇ ಬಿಡುಗಡೆಗೊಳಿಸಲು ಆರಂಭಿಸಿತ್ತು.
‘ದುರಂತದಲ್ಲಿ ಮೃತಪಟ್ಟವರಲ್ಲಿ 166 ಜನರ ಕುಟುಂಬಸ್ಥರಿಗೆ ಮಧ್ಯಂತರ ಪರಿಹಾರ ಬಿಡುಗಡೆಗೊಳಿಸಲಾಗಿದೆ. 52 ಜನರ ದಾಖಲೆ ಪರಿಶೀಲನೆ ನಡೆಯುತ್ತಿದೆ’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ತಲಾ ₹1 ಕೋಟಿ ಪರಿಹಾರ ನೀಡುವುದಾಗಿ ಟಾಟಾ ಸಮೂಹವು ದುರಂತ ನಡೆದ ಬೆನ್ನಲ್ಲೇ ಘೋಷಣೆ ಮಾಡಿತ್ತು. ಸಂತ್ರಸ್ತರಿಗಾಗಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಅನ್ನು ಸ್ಥಾಪಿಸಿ, ₹500 ಕೋಟಿ ಮೀಸಲಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.