ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ
–ಪಿಟಿಐ ಚಿತ್ರ
ಬೆಂಗಳೂರು: ವಿಶಾಖಪಟ್ಟಣಕ್ಕೆ ಬೆಂಗಳೂರಿನಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು, ತಾಂತ್ರಿಕ ಕಾರಣದಿಂದಾಗಿ ಶನಿವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು (ಶನಿವಾರ) ಬೆಳಿಗ್ಗೆ 10ಕ್ಕೆ ವಿಮಾನ ಟೇಕ್ ಆಫ್ ಆಯಿತು. ಆದರೆ ತಾಂತ್ರಿಕ ಸಮಸ್ಯೆಯಿಂದ ಹಲವು ಕಾಲ ಬೆಂಗಳೂರಿನ ಸುತ್ತಲೂ ತಿರುಗಿದ ವಿಮಾನ, ನಂತರ ಟೇಕ್ ಆಫ್ ಆದ ನಿಲ್ದಾಣಕ್ಕೇ ಬಂದಿಳಿಯಿತು.
‘ಇದು ತುರ್ತು ಭೂಸ್ಪರ್ಶ ಅಲ್ಲ. ತಾಂತ್ರಿಕ ಸಮಸ್ಯೆಯಿಂದಷ್ಟೇ ವಿಮಾನ ಮರಳಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವ ರೀತಿಯ ತಾಂತ್ರಿಕ ಸಮಸ್ಯೆ ಎಂಬ ಮಾಹಿತಿ ವಿಮಾನಯಾನ ಸಂಸ್ಥೆಯಿಂದ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.