ADVERTISEMENT

ಪಂಜಾಬ್‌ನಲ್ಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 7:30ಕ್ಕೆ ತೆರೆಯಲಿವೆ; ಕಾರಣ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2023, 4:19 IST
Last Updated 9 ಏಪ್ರಿಲ್ 2023, 4:19 IST
ಭಗವಂತ ಮಾನ್
ಭಗವಂತ ಮಾನ್   

ನವದೆಹಲಿ: ಪಂಜಾಬ್‌ನಲ್ಲಿ ಸರ್ಕಾರಿ ಕಚೇರಿಗಳು ಬೇಸಿಗೆಯಲ್ಲಿ ಬೆಳಿಗ್ಗೆ 7.30ಕ್ಕೆ ತೆರೆಯಲಿವೆ ಎಂದು ಮುಖ್ಯಮಂತ್ರಿ ಭಗವಂತ ಮಾನ್ ಘೋಷಿಸಿದ್ದಾರೆ.

ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 7.30ರಿಂದ ಅಪರಾಹ್ನ 2ಗಂಟೆಯವರೆಗೆ ತೆರೆದಿರುತ್ತವೆ ಎಂದು ಅವರು ಹೇಳಿದರು.

ಸಮಯ ಬದಲಾವಣೆಗೆ ಕಾರಣ ಏನು?
ಬೇಸಿಗೆಯಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡುವುದರಿಂದ ವಿದ್ಯುತ್ ಬೇಡಿಕೆಯ ಹೊರೆ ಕಡಿತವಾಗಲಿದೆ ಎಂದು ಸಿಎಂ ಮಾನ್ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಮೇ 2ರಿಂದ ಜುಲೈ 15ರವರೆಗೆ ಹೊಸ ಕಚೇರಿ ಸಮಯ ಜಾರಿಯಲ್ಲಿರುತ್ತದೆ.

ಮಧ್ಯಾಹ್ನ 1.30ರ ಬಳಿಕ ವಿದ್ಯುತ್ ಬಳಕೆ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದು ಸರ್ಕಾರಿ ಕಚೇರಿಗಳನ್ನು 2 ಗಂಟೆಯೊಳಗೆ ಮುಚ್ಚಿದರೆ ಗರಿಷ್ಠ ವಿದ್ಯುತ್ ಬಳಕೆಯನ್ನು 350 ಮೆಗಾ ವ್ಯಾಟ್‌ನಿಂದ 300ಕ್ಕೆ ಇಳಿಸಬಹುದು ಎಂದು ಪಂಜಾಬ್ ರಾಜ್ಯ ವಿದ್ಯುತ್ ಕಾರ್ಪೋರೇಷನ್ ಲಿಮಿಟೆಡ್ ಸಲಹೆ ನೀಡಿರುವುದಾಗಿ ಸಿಎಂ ತಿಳಿಸಿದರು.

ಜನ ಸಾಮಾನ್ಯರು ಹಾಗೂ ನೌಕರರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದೇಶಗಳಲ್ಲಿ ಈ ವಿಧಾನ ಆಳವಡಿಸಲಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.