ಜಮ್ಮು: ಹಿಮಾಲಯದ ತಪ್ಪಲಲ್ಲಿರುವ ಅಮರನಾಥನ ಸನ್ನಿಧಿಗೆ 900 ಮಹಿಳೆಯರು ಸೇರಿದಂತೆ 4,388 ಯಾತ್ರಾರ್ಥಿಗಳ 20ನೇ ತಂಡವು ಇಲ್ಲಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಭಾನುವಾರ ತೆರಳಿತು.
ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗದ ದರ್ಶನವನ್ನು ಇದುವರೆಗೂ 2.90 ಲಕ್ಷಕ್ಕೂ ಹೆಚ್ಚು ಭಕ್ತರು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2,815 ಯಾತ್ರಿಕರು 115 ವಾಹನಗಳಲ್ಲಿ ಪಹಲ್ಗಾಮ್ ಹಾದಿಯಲ್ಲಿ ತೆರಳಿದರೆ, 1,573 ಭಕ್ತರು 95 ವಾಹನಗಳಲ್ಲಿ ಬಾಲ್ತಾಲ್ ಮಾರ್ಗವಾಗಿ ಅಮರನಾಥನ ದರ್ಶನಕ್ಕೆ ತೆರಳಿದರು. ಇವರಲ್ಲಿ 130 ಸಾಧುಗಳು ಹಾಗೂ ಸಾಧ್ವಿಗಳಿದ್ದು, ಎಲ್ಲರಿಗೂ ಭದ್ರತಾ ಪಡೆಗಳು ಬೆಂಗಾವಲಾಗಿ ರಕ್ಷಣೆ ಒದಗಿಸಿವೆ.
ಜುಲೈ 3ರಂದು ಆರಂಭವಾಗಿರುವ 38 ದಿನಗಳ ಅಮರನಾಥ ಯಾತ್ರೆಯು ರಕ್ಷಾಬಂಧನ ಹಬ್ಬದ ದಿನ ಮುಕ್ತಾಯಗೊಳ್ಳಲಿದ್ದು, ಹಿಮಲಿಂಗದ ದರ್ಶನ ಪಡೆದ ಭಕ್ತರ ಸಂಖ್ಯೆ ಶೀಘ್ರದಲ್ಲೇ ಮೂರು ಲಕ್ಷ ದಾಟಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.