ನ್ಯೂಯಾರ್ಕ್: ಸಮಾಜಸೇವೆ, ಪರೋಪಕಾರ ಕಾರ್ಯಗಳಿಂದ ಮನ್ನಣೆ ಗಳಿಸಿರುವ 2025ನೇ ಸಾಲಿನ 100 ಮಂದಿ ಪ್ರಭಾವಿಗಳ ಪಟ್ಟಿಯನ್ನು ‘ಟೈಮ್’ ನಿಯತಕಾಲಿಕೆ ಮಂಗಳವಾರ ಅನಾವರಣಗೊಳಿಸಿದೆ. ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ, ವಿಪ್ರೋದ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಜೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಹೆಸರೂ ಈ ಪಟ್ಟಿಯಲ್ಲಿದೆ.
ಟೈಮ್ ನಿಯತಕಾಲಿಕೆಯ ಪ್ರಕಾರ, ಮುಕೇಶ್ ಹಾಗೂ ನೀತಾ ಅಂಬಾನಿ ಅವರು 2024ರಲ್ಲಿ ₹407 ಕೋಟಿಯನ್ನು ಪರೋಪಕಾರಕ್ಕೆ ವಿನಿಯೋಗಿಸಿದ್ದಾರೆ. ಈ ಮೂಲಕ ದೇಶದ ಅತಿದೊಡ್ಡ ದಾನಿಗಳು ಎನಿಸಿಕೊಂಡಿದ್ದಾರೆ.
ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಅಜೀಂ ಪ್ರೇಮ್‌ಜಿ 2023–24ರಲ್ಲಿ ಶಿಕ್ಷಣ ಆಧರಿತವಾದ 940 ಸಂಸ್ಥೆಗಳಿಗೆ ₹932 ಕೋಟಿ ಅನುದಾನ ನೀಡಿದ್ದಾರೆ ಎನ್ನಲಾಗಿದೆ. ಜೆರೋದಾ ಸಹ ಸಂಸ್ಥಾಪಕ ನಿಖಿಲ್ ಪರೋಪಕಾರದ ಕಾರ್ಯಗಳಿಗಾಗಿ ₹855 ಕೋಟಿ ಮೀಸಲಿಟ್ಟಿದ್ದಾರೆ ಎಂದೂ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.