ADVERTISEMENT

ಅಕಾಲಿಕ ನಿಧನದ ಶೂನ್ಯ ತುಂಬುವುದು ಸುಲಭದ ಮಾತಲ್ಲ

ವಿಜೇಶ್ ಕಾಮತ್
Published 12 ನವೆಂಬರ್ 2018, 11:40 IST
Last Updated 12 ನವೆಂಬರ್ 2018, 11:40 IST
   

ಬೆಂಗಳೂರು:ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿಯಪ್ರಭಾವಿ ನಾಯಕರೂ ಆಗಿದ್ದ ಅನಂತಕುಮಾರ್ ಅವರ ಅಕಾಲಿಕ ನಿಧನವು ಪಕ್ಷದಲ್ಲಿ ಸೃಷ್ಟಿಸಿರುವ ನಿರ್ವಾತವನ್ನು ತುಂಬುವುದು ಮಾತಲ್ಲ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದ ಅನಂತಕುಮಾರ್, ಹಲವಾರು ಬಾರಿ ಸಂಕಷ್ಟದ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಿದ್ದರು.22 ವರ್ಷಗಳಿಂದ ಅನಂತಕುಮಾರ್ ಪ್ರತಿನಿಧಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಮರ್ಥಅಭ್ಯರ್ಥಿಯನ್ನು ಹುಡುಕುವುದೂ ಬಿಜೆಪಿಗೆ ಸವಾಲಾಗಿದೆ. ಪರೋಪಕಾರದ ಗುಣ ಹೊಂದಿದ್ದ ಅವರ ಮಾರ್ಗದರ್ಶನವನ್ನು ಪಕ್ಷ ಒಂದಲ್ಲ ಒಂದು ರೀತಿಯಲ್ಲಿ ಸದಾಬಯಸುತ್ತಿತ್ತು.

ಅವರು ತೆಗೆದುಕೊಂಡ ಹಲವು ಜಾಣತನದ ರಾಜಕೀಯ ನಿರ್ಧಾರಗಳು ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟವು.ಅನೇಕ ಸಂದರ್ಭಗಳಲ್ಲಿ ತಮ್ಮ ತಂತ್ರಗಾರಿಕೆಯಿಂದ ಪಕ್ಷವನ್ನು ಗಂಡಾಂತರದಿಂದ ಪಾರು ಮಾಡಿದ್ದರು.

ADVERTISEMENT

2003ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅನಂತಕುಮಾರ್, 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣರಾದರು. ಸರಿಯಾದ ಸ್ಥಳದಲ್ಲಿ, ಸರಿಯಾದ ಜನರೊಂದಿಗೆ ಆತ್ಮೀಯತೆ ಸಾಧಿಸುವ ಚಾಕಚಕ್ಯತೆ ಅವರ ಯಶಸ್ಸಿಗೆ ತನ್ನದೇ ಆದ ಕೊಡುಗೆಯನ್ನು ನೀಡಿತ್ತು.

ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಗ 75 ವರ್ಷ. ಕಳೆದ ಕೆಲ ತಿಂಗಳುಗಳಿಂದ ಪಕ್ಷದ ಮೇಲೆ ಅವರಿಗೆ ಮೊದಲಿನಹಿಡಿತ ಇಲ್ಲ ಎನಿಸುವಂಥ ಬೆಳವಣಿಗೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಅನಂತಕುಮಾರ್ನಿಧನ ಬಿಜೆಪಿಗೆ ದೊಡ್ಡ ನಷ್ಟವೇ ಸರಿ.ಓರ್ವ ಸಮರ್ಥ ನಾಯಕನನ್ನು ಕಳೆದುಕೊಂಡಿರುವ ಬಿಜೆಪಿಯಲ್ಲಿಪ್ರಸ್ತುತ ಪಕ್ಷವನ್ನು ಆತ್ಮವಿಶ್ವಾಸದಿಂದ ಮುನ್ನಡೆಸಬಲ್ಲ ಸಮರ್ಥ ಯುವಕರ ನಾಯಕರ ಕೊರತೆ ಎದ್ದು ಕಾಣುತ್ತಿದೆ.

ಬಿಜೆಪಿ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದ ಅನಂತಕುಮಾರ್ ಅವರನ್ನು ಕಾರ್ಯಕರ್ತರುಕರ್ನಾಟಕದಲ್ಲಿ ‘ಬಿಜೆಪಿಯ ದೆಹಲಿ ಮುಖ’ ಎಂದೇ ಭಾವಿಸಿದ್ದರು.ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ವಿಷಯಗಳನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲ ಮತ್ತು ಮುಂದಕ್ಕೆ ಒಯ್ಯಬಲ್ಲ ಸಾಮರ್ಥ್ಯ ಅವರಿಗಿತ್ತು. ಹೀಗಾಗಿಯೇರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಕೆಲ ವಿಷಯಗಳಲ್ಲಿಅನಂತಕುಮಾರ್ ಮೇಲಿನಅವಲಂಬನೆ ಅನಿವಾರ್ಯವಾಗುತ್ತಿತ್ತು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.