ADVERTISEMENT

WAVES Summit: 'ಕ್ರಿಯೇಟರ್‌ಲ್ಯಾಂಡ್' ನಿರ್ಮಾಣಕ್ಕೆ ಆಂಧ್ರ ಸರ್ಕಾರ ಒಪ್ಪಂದ

ಪಿಟಿಐ
Published 3 ಮೇ 2025, 11:03 IST
Last Updated 3 ಮೇ 2025, 11:03 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಅಮರಾವತಿ: ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗಸಭೆಯಲ್ಲಿ ಟ್ರಾನ್ಸ್‌ಮೀಡಿಯಾ ಮನರಂಜನಾ ನಗರ 'ಕ್ರಿಯೇಟರ್‌ಲ್ಯಾಂಡ್' ಸ್ಥಾಪಿಸುವ ಒಪ್ಪಂದಕ್ಕೆ ಆಂಧ್ರಪ್ರದೇಶ ಸರ್ಕಾರ ಸಹಿ ಹಾಕಿದೆ.

ಈ ಯೋಜನೆಯಡಿ ಥೀಮ್ ಪಾರ್ಕ್‌ಗಳು, ಗೇಮಿಂಗ್ ವಲಯಗಳು ಮತ್ತು ಜಾಗತಿಕ ಸಿನಿಮಾ ಸಹ-ನಿರ್ಮಾಣ ವಲಯಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ಈ ಯೋಜನೆ ಮೂಲಕ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಡಿಜಿಟಲ್ ಆಧುನಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರವು ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಟ್ರಾನ್ಸ್‌ಮೀಡಿಯಾ ನಗರ 'ಕ್ರಿಯೇಟರ್‌ಲ್ಯಾಂಡ್' ನಿರ್ಮಿಸಲು ₹10,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.

ADVERTISEMENT

ಕ್ರಿಯೇಟಿವ್‌ಲ್ಯಾಂಡ್ ಏಷ್ಯಾ ಜತೆಗಿನ ಪಾಲುದಾರಿಕೆಯು ಚಲನಚಿತ್ರ ಮತ್ತು ಮನರಂಜನಾ ಸೇರಿದಂತೆ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಕಲ್ಪಿಸುವ ಒಪ್ಪಂದವಾಗಿದೆ. ಇದು ಪ್ರತಿಭೆ, ನಾವೀನ್ಯತೆ ಮತ್ತು ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಕೆ. ದುರ್ಗೇಶ್ ತಿಳಿಸಿದ್ದಾರೆ.

ಈ ಮನರಂಜನಾ ಕೇಂದ್ರವು ಆಂಧ್ರಪ್ರದೇಶ ಸೇರಿದಂತೆ ದೇಶದ ಯುವಕರಿಗೆ ಸೃಜನಶೀಲ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ದುರ್ಗೇಶ್ ಹೇಳಿದ್ದಾರೆ.

ಮೇ 1ರಿಂದ ನಡೆಯುತ್ತಿರುವ ವೇವ್ಸ್ ಶೃಂಗಸಭೆಯನ್ನು (WAVES) ಪ್ರಧಾನಿ ನರೇಂದ್ರ ಮೋದಿ ಮುಂಬೈನಲ್ಲಿ ಉದ್ಘಾಟಿಸಿದರು. ಮೇ 4ರವರೆಗೆ ವೇವ್ಸ್ ಶೃಂಗಸಭೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.