ADVERTISEMENT

ಹೈದರಾಬಾದ್ ಬಳಿ ರಸ್ತೆ ಅಪಘಾತ: ಆಂಧ್ರದ ಇಬ್ಬರು ಪೊಲೀಸ್ ಅಧಿಕಾರಿಗಳ ಸಾವು

ಪಿಟಿಐ
Published 26 ಜುಲೈ 2025, 13:00 IST
Last Updated 26 ಜುಲೈ 2025, 13:00 IST
<div class="paragraphs"><p>ಚಂದ್ರಾಕರ್ ರಾವ್,&nbsp;ಶಾಂತ್ ರಾವ್</p></div>

ಚಂದ್ರಾಕರ್ ರಾವ್, ಶಾಂತ್ ರಾವ್

   

ಹೈದರಾಬಾದ್: ಯಾದಾದ್ರಿ ಭುವನಗಿರಿ ಜಿಲ್ಲೆಯ ಹೈದರಾಬಾದ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಆಂಧ್ರಪ್ರದೇಶದ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತರಾಗಿದ್ದಾರೆ.

ಮೃತ ಅಧಿಕಾರಿಗಳನ್ನು ಆಂಧ್ರಪ್ರದೇಶದ ಗುಪ್ತದಳದ ಡಿಎಸ್‌ಪಿಗಳಾದ ಚಂದ್ರಾಕರ್ ರಾವ್ (48) ಶಾಂತ್ ರಾವ್ (49) ಎಂದು ಗುರುತಿಸಲಾಗಿದೆ.

ADVERTISEMENT

ಪೊಲೀಸ್ ಅಧಿಕಾರಿಗಳು ತಮ್ಮ ತಂಡದೊಂದಿಗೆ ಸ್ಕಾರ್ಫಿಯೊ ಕಾರಿನಲ್ಲಿ ಕಾರ್ಯನಿಮಿತ್ತ ವಿಜಯವಾಡದಿಂದ ಹೈದರಾಬಾದ್‌ಗೆ ತೆರಳುತ್ತಿದ್ದರು. ಚುಟ್ಟುಪಲ್ಲಿ ಬಳಿಯಲ್ಲಿ ಬೆಳಿಗ್ಗೆ 6 ಗಂಟೆ ಸುಮಾರು ಕಾರು ಡಿವೈಡರ್‌ಗೆ ಅಪ್ಪಳಿಸಿ, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎಎಸ್‌ಪಿ ಪ್ರಸಾದ್ ಹಾಗೂ ಕಾರು ಚಾಲಕ ನರಸಿಂಗ್ ರಾವ್ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.