ADVERTISEMENT

ಆಫ್ರಿಕಾದಿಂದ ಮತ್ತೆ 8 ಚೀತಾಗಳು ಭಾರತಕ್ಕೆ

ಪಿಟಿಐ
Published 8 ನವೆಂಬರ್ 2025, 13:45 IST
Last Updated 8 ನವೆಂಬರ್ 2025, 13:45 IST
   

ಭೋಪಾಲ್: ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವ 2022ರ ಕಾರ್ಯಕ್ರಮದ ಅಡಿಯಲ್ಲಿ ಸ್ಥಳಾಂತರಿಸಲು 8 ಚೀತಾಗಳನ್ನು ದಕ್ಷಿಣ ಆಫ್ರೀಕಾದ ಬೋಟ್ಸ್‌ವಾನಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎರಡು ಗಂಡು ಚೀತಾಗಳು ಸೇರಿ ಒಟ್ಟು ಎಂಟು ಚೀತಾಗಳನ್ನು ಒಂದು ತಿಂಗಳ ಕಾಲ ಪ್ರತ್ಯೇಕವಾಸದಲ್ಲಿ ಇರಿಸಲಾಗುತ್ತದೆ. ಭಾರತಕ್ಕೆ ಕಳುಹಿಸುವ ಮೊದಲು ಅವುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಮಧ್ಯಪ್ರದೇಶದ ಶಿಯೊಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವಕ್ಕೆ ಜನವರಿಯಲ್ಲಿ ಚೀತಾಗಳನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಂತರ ಖಂಡಗಳ ಈ ಸ್ಥಳಾಂತರವು ಹಲವಾರು ಔಪಚಾರಿಕತೆಗಳನ್ನು ಒಳಗೊಂಡಿದೆ. ಔಪಚಾರಿಕ ಪ್ರಕ್ರಿಯೆ ಮತ್ತು ಮುಂಬರುವ ಕ್ರಿಸ್‌ಮಸ್ ರಜಾದಿನಗಳನ್ನು ಪರಿಗಣಿಸಿ ಅವುಗಳನ್ನು ಸ್ಥಳಾಂತರ ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

2022ರ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಅವರು ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಕುನೊ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದರು. ಅದತ ನಂತರ 2023ರ ವೇಳೆಗೆ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಅಮದು ಮಾಡಿಕೊಳ್ಳಲಾಗಿತ್ತು. 

ನೆಲದ ಮೇಲೆ ಅತ್ಯಂತ ವೇಗವಾಗಿ ಚಲಿಸುವ ಚೀತಾಗಳು ಭಾರತದಲ್ಲಿ ದಶಕಗಳ ಹಿಂದೆಯೆ ಅಳಿದುಹೋಗಿದ್ದವು. 2022ರಲ್ಲಿ ಅವುಗಳನ್ನು ದೇಶಕ್ಕೆ ಮರು ಪರಿಚಯಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಭಾರತದಲ್ಲಿ ಪ್ರಸ್ತುತ 27 ಚೀತಾಗಳಿದ್ದು, ಯೋಜನೆ ಪ್ರಾರಂಭವಾದಂದಿನಿಂದ 19 ಚೀತಾಗಳು (9 ಆಮದು ಮಾಡಿಕೊಂಡವು, ಭಾರತದಲ್ಲಿ ಜನಿಸಿದ 10 ಮರಿಗಳು) ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.