ADVERTISEMENT

ಸಿಯಾಚಿನ್‌: ಸೇನಾಧಿಕಾರಿ ಸಾವು, ಮೂವರು ಯೋಧರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 14:38 IST
Last Updated 19 ಜುಲೈ 2023, 14:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಯಾಚಿನ್‌: ಸಿಯಾಚಿನ್‌ ನೀರ್ಗಲ್ಲಿನಲ್ಲಿ ಬುಧವಾರ ನಸುಕಿನ 3 ಗಂಟೆಯಲ್ಲಿ ನಡೆದಿರುವ ಬೆಂಕಿ ಆಕಸ್ಮಿಕದಲ್ಲಿ ಒಬ್ಬರು ಸೇನಾಧಿಕಾರಿ ಮೃತಪಟ್ಟಿದ್ದು, ಮೂವರು ಯೋಧರು ಗಂಭೀರ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಯ ರೆಜಿಮೆಂಟಲ್ ವೈದ್ಯಾಧಿಕಾರಿ, ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರು ಗಂಭೀರ ಸುಟ್ಟ ಗಾಯಗಳಿಂದ ಮೃತರಾಗಿದ್ದಾರೆ. ಉಳಿದ ಮೂವರು ಯೋಧರಿಗೆ ಎರಡನೇ ಹಂತದ ಸುಟ್ಟಗಾಯಗಳಾಗಿದ್ದು, ಹೊಗೆ ಉಸಿರಾಡಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT