ADVERTISEMENT

ವಿಶ್ವಾಸಮತ ಗೆದ್ದ ಅರವಿಂದ ಕೇಜ್ರಿವಾಲ್: ಬಿಜೆಪಿ ವಿರುದ್ಧ ವಾಗ್ದಾಳಿ

ಪಿಟಿಐ
Published 17 ಫೆಬ್ರುವರಿ 2024, 10:46 IST
Last Updated 17 ಫೆಬ್ರುವರಿ 2024, 10:46 IST
<div class="paragraphs"><p>ವಿಧಾನಸಭೆಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್</p></div>

ವಿಧಾನಸಭೆಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್

   

– ಪಿಟಿಐ ಚಿತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸಮತ ‘ಪರೀಕ್ಷೆ’ಯಲ್ಲಿ ಗೆಲುವು ಸಾಧಿಸಿದ್ದಾರೆ.

ADVERTISEMENT

ವಿಶ್ವಾಸಮತ ಪ್ರಕ್ರಿಯೆ ವೇಳೆ ಒಟ್ಟು 62 ಶಾಸಕರು ಸದನದಲ್ಲಿ ಹಾಜರಿದ್ದರು. ಸರ್ಕಾರದ ಪರವಾಗಿ 54 ಮತಗಳು ಬಿದ್ದವು.

‘ಎಎಪಿಯ ಯಾವ ಶಾಸಕರೂ ಅನರ್ಹರಾಗಿಲ್ಲ. ಇಬ್ಬರು ಜೈಲಿನಲ್ಲಿದ್ದಾರೆ. ಕೆಲವರಿಗೆ ಅನಾರೋಗ್ಯ ಇದೆ. ಇನ್ನು ಕೆಲವರು ದೆಹಲಿಯಿಂದ ಹೊರಗೆ ಇದ್ದಾರೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್, ‘ನಮ್ಮ ಶಾಸಕರಿಗೆ ಆಮಿಷ ಒಡ್ಡಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ವಿಶ್ವಾಸಮತ ಪ್ರಸ್ತಾವನೆಯನ್ನು ಮಂಡಿಸಬೇಕಾಯಿತು’ ಎಂದು ಹೇಳಿದರು.

‘ಹಲವು ಶಾಸಕರನ್ನು ಬಿಜೆಪಿಯವರು ಭೇಟಿಯಾಗಿ ಪಥ ಬದಲಿಸುವಂತೆ ಆಮಿಷ ಒಡ್ಡಿದ್ದರು. ಇದನ್ನು ಶಾಸಕರೇ ಖುದ್ದಾಗಿ ಬಂದು ನನ್ನ ಜೊತೆ ಹೇಳಿದ್ದಾರೆ’ ಎಂದರು.

‘ಆಮ್ ಆದ್ಮಿ ಪಕ್ಷವು ಬಿಜೆಪಿಗೆ ದೊಡ್ಡ ಸವಾಲಾಗಿದ್ದು, ಹೀಗಾಗಿ ಎಲ್ಲಾ ಕಡೆಗಳಿಂದಲೂ ದಾಳಿ ಎದುರಿಸುತ್ತಿದೆ’ ಎಂದು ದೂರಿದರು.

‘ಒಂದು ವೇಳೆ ಈ ಚುನಾವಣೆಯಲ್ಲಿ (2024ರ ಲೋಕಸಭೆ ಚುನಾವಣೆ) ಬಿಜೆಪಿ ಗೆಲುವು ಸಾಧಿಸಿದರೂ, 2029ರಲ್ಲಿ ಬಿಜೆಪಿಯಿಂದ ದೇಶವನ್ನು ಎಎಪಿ ಮುಕ್ತಿಗೊಳಿಸಲಿದೆ ಎಂದು ಕೇಜ್ರಿವಾಲ್ ನುಡಿದರು.

’ನನ್ನನ್ನು ಬಂಧಿಸುವ ಮೂಲಕ ಎಎಪಿಯನ್ನು ಮುಗಿಸಬಹುದು ಎಂದು ಬಿಜೆಪಿ ತಿಳಿದುಕೊಂಡಿದೆ. ನನ್ನನ್ನು ಬಂಧಿಸಬಹುದು ಆದರೆ ನನ್ನ ಆಲೋಚನೆಗಳನ್ನು ಮುಗಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸೇವಾ ಇಲಾಖೆಗಳನ್ನು ಹಾಗೂ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ನಮ್ಮ ಕೆಲಸಗಳಿಗೆ ತಡೆಯೊಡ್ಡುತ್ತಿದೆ ಎಂದು ಆರೋಪಿಸಿರು.

ಅವರು ತಮ್ಮನ್ನು ತಾವು ರಾಮ ಭಕ್ತರೆಂದು ಕರೆದುಕೊಳ್ಳುತ್ತಾರೆ. ಆದರೆ ನಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಸಿಗುವ ಔಷಧಗಳನ್ನು ನಿಲ್ಲಿಸಿದ್ದಾರೆ. ಹೀಗೆ ಮಾಡಲು ರಾಮ ಹೇಳಿದ್ದಾನೆಯೇ ಎಂದು ಪ್ರಶ್ನಿಸಿದರು.

ಈ ಹಿಂದೆ ಹಲವು ದಾಳಿಗಳು ನನ್ನ ಮೇಲೆ ನಡೆದವು. ನನ್ನ ಮೇಲೆ ಹಲ್ಲೆ ಮಾಡಿದರು, ಮಸಿ ಎರಚಿದರು, ಈಗ ನನ್ನನ್ನು ಬಂಧಿಸಲು ಸಜ್ಜಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.