ADVERTISEMENT

ಮಳೆ ಅಡ್ಡಿ: ಸಪ್ತಪದಿ ಶಾಸ್ತ್ರಕ್ಕೆ ಮಂಟಪ ಬಿಟ್ಟುಕೊಟ್ಟ ಮುಸ್ಲಿಂ ಕುಟುಂಬ

ಪಿಟಿಐ
Published 22 ಮೇ 2025, 13:34 IST
Last Updated 22 ಮೇ 2025, 13:34 IST
<div class="paragraphs"><p>ಒಂದೇ ವೇದಿಕೆಯಲ್ಲಿ ಎರಡು ಕುಟುಂಬದ ವಧು–ವರರು</p></div>

ಒಂದೇ ವೇದಿಕೆಯಲ್ಲಿ ಎರಡು ಕುಟುಂಬದ ವಧು–ವರರು

   

ಚಿತ್ರಕೃಪೆ: ಎಕ್ಸ್‌

ಪುಣೆ: ಇನ್ನೇನು ಹಿಂದೂ ಕುಟುಂಬದ ಮದುವೆ ಶಾಸ್ತ್ರಗಳು ಆರಂಭವಾಗಬೇಕು ಎನ್ನುವಷ್ಟರಲ್ಲಿ ಜೋರಾಗಿ ಮಳೆ ಸುರಿಯಿತು. ಪಕ್ಕದಲ್ಲೇ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದ ಮುಸ್ಲಿಂ ಕುಟುಂಬವು ಸಪ್ತಪದಿ ಶಾಸ್ತ್ರಕ್ಕೆ ಮಂಟಪ ಬಿಟ್ಟುಕೊಟ್ಟು ಸೌಹಾರ್ದ ಮೆರೆದ ಘಟನೆ ಪುಣೆಯಲ್ಲಿ ಮಂಗಳವಾರ ನಡೆದಿದೆ.

ADVERTISEMENT

ಸಂಸ್ಕೃತಿ ಕವಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹವು ಮಂಗಳವಾರ ಸಂಜೆ 6.56 ಕ್ಕೆ ಅಲಂಕಾರನ್ ಲಾನ್ಸ್‌ನಲ್ಲಿ ನಿಗದಿಯಾಗಿತ್ತು. ಇದೊಂದು ಹೊರಾಂಗಣ ವಿವಾಹ ಸಮಾರಂಭವಾಗಿತ್ತು. ಇಲ್ಲೇ ಹತ್ತಿರದ ಸಭಾಂಗಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಫಾರೂಕ್ ಖಾಜಿಯ ಅವರ ಮಗನ ಆರತಕ್ಷತೆಗೆ ಸಿದ್ಧತೆ ನಡೆದಿತ್ತು.

‘ಮದುವೆ ಶಾಸ್ತ್ರಗಳು ಪ್ರಾರಂಭವಾಗುತ್ತಿದ್ದಂತೆ ಮಳೆ ಸುರಿದಿದೆ. ಮಳೆ ನಿಲ್ಲಬಹುದೆಂದು ಭಾವಿಸಿ ಮೊದಲಿಗೆ ಸುಮ್ಮನಿದ್ದೆವು. ಮಳೆ ನಿಲ್ಲುವ ಸೂಚನೆಯಿಲ್ಲದನ್ನು ಕಂಡು ಬೇರೆ ವ್ಯವಸ್ಥೆ ಮಾಡಲು ನಿರ್ಧಾರ ಮಾಡಬೇಕಾಯಿತು. ಆಗ ಪಕ್ಕದ ಸಭಾಂಗಣವೊಂದರಲ್ಲಿ ಆರತಕ್ಷತೆ ನಡೆಯುತ್ತಿರುವುದು ಗಮನಕ್ಕೆ ಬಂತು. ಅಲ್ಲಿಗೆ ತೆರಳಿ ಸಪ್ತಪದಿ ಶಾಸ್ತ್ರಕ್ಕೆ ಸ್ವಲ್ಪ ಸಮಯ ಸಭಾಂಗಣ ಬಿಟ್ಟುಕೊಡುವಂತೆ ನಾವು ಆ ಕುಟುಂಬವನ್ನು ವಿನಂತಿಸಿದೆವು’ ಎಂದು ಗಲಾಂಡೆ ಕುಟುಂಬದ ಸದ್ಯಸರೊಬ್ಬರು ಹೇಳಿದ್ದಾರೆ.

‘ಖಾಜಿ ಅವರ ಕುಟುಂಬವು ತಕ್ಷಣ ಒಪ್ಪಿಕೊಂಡು ವೇದಿಕೆಯನ್ನು ಬಿಟ್ಟುಕೊಟ್ಟರು. ಅಲ್ಲದೇ ಮದುವೆ ಶಾಸ್ತ್ರಗಳು ಸರಗವಾಗಿ ನಡೆಯಲು ಅವರು ನಮಗೆ ಸಹಾಯ ಮಾಡಿದರು’ ಎಂದು ತಿಳಿಸಿದ್ದಾರೆ.

‘ಕೊನೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಒಟ್ಟಿಗೆ ಊಟ ಮಾಡಿ, ಫೋಟೊ ಕ್ಲಿಕ್ಕಿಸಿಕೊಂಡೆವು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.