ADVERTISEMENT

UP: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸೆರೆಯಾದ ಚಾಲಾಕಿ ಮಾಡಿದ್ದ ಉಪಾಯ ಏನು?

ಪಿಟಿಐ
Published 4 ಡಿಸೆಂಬರ್ 2025, 7:48 IST
Last Updated 4 ಡಿಸೆಂಬರ್ 2025, 7:48 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಶಹಜಾನ್‌ಪುರ: ಟೋಲ್‌ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನ ಮೇಲೆ 'ಅಶೋಕ ಲಾಂಛನ' ಹಾಗೂ 'ಭಾರತ ಸರ್ಕಾರ' ಪ್ಲೇಟ್‌ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಶಹಜಾನ್‌ಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ADVERTISEMENT

ಈ ಕುರಿತು, ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

ಕತ್ರಾ ನಿವಾಸಿ ರಜತ್‌ ಶರ್ಮಾ ಎಂಬವರು, ಕಲೀಮ್‌ ಖಾನ್‌ ಎಂಬಾತ ತನ್ನನ್ನು ಕೊಲೆ ಮಾಡಲು ಯತ್ನಿಸಿದ ಎಂದು ಆರೋಪಿಸಿ ಮಂಗಳವಾರ ರಾತ್ರಿ ದೂರು ನೀಡಿದ್ದರು. ಅದರಂತೆ, ಆರೋಪಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆಯುವ ಸಂದರ್ಭದಲ್ಲಿ ಆತ, 'ಅಶೋಕ ಲಾಂಛನ' ಹಾಗೂ 'ಭಾರತ ಸರ್ಕಾರ' ಪ್ಲೇಟ್‌ ಹಾಕಿದ್ದ ಕಾರಿನಲ್ಲಿ ಕುಳಿತಿದ್ದ ‌ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಜೇಶ್‌ ದ್ವಿವೇದಿ ಪಿಟಿಐಗೆ ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ, ಕಾರಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಒದಗಿಸಲು ಖಾನ್‌ ವಿಫಲವಾಗಿದ್ದ. ಟೋಲ್‌ಗಳಲ್ಲಿ ಸುಂಕ ಪಾವತಿಸುವುದರಿಂದ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ 'ಅಶೋಕ ಲಾಂಛನ' ಹಾಗೂ 'ಭಾರತ ಸರ್ಕಾರ' ಪ್ಲೇಟ್‌ ಬಳಸುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.