ಕಲ್ಕಿ ವಿಷ್ಣು ದೇಗುಲದಲ್ಲಿ ಎಎಸ್‌ಐ ಸಮೀಕ್ಷೆ
(ಪಿಟಿಐ ಚಿತ್ರ)
ಲಖನೌ: ಸಂಭಲ್‌ನ ಪ್ರಸಿದ್ಧ ಜಾಮಾ ಮಸೀದಿಗೆ ಒಂದು ಕಿ.ಮೀ ದೂರದಲ್ಲಿ ಇತ್ತೀಚೆಗೆ ಪತ್ತೆ ಮಾಡಲಾಗಿದ್ದ ‘ಕಲ್ಕಿ ವಿಷ್ಣು ದೇವಾಲಯ’ದ ಸುತ್ತಮುತ್ತ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಶನಿವಾರ ಸಮೀಕ್ಷೆ ನಡೆಸಿದೆ.
ದೇವಾಲಯ ಹಾಗೂ ಅದರ ಆವರಣದಲ್ಲಿರುವ 19 ‘ಕೃಷ್ಣ ಕೂಪ’ (ಬಾವಿ) ಹಾಗೂ ಐದು ‘ತೀರ್ಥ’ಗಳಲ್ಲಿ ಇಲಾಖೆಯ ನಾಲ್ವರ ತಂಡವು ಸಮೀಕ್ಷೆ ನಡೆಸಿದೆ.
ದೇವಾಲಯದಲ್ಲಿ ಪತ್ತೆಯಾದ ವಸ್ತುಗಳ ಮಾದರಿಗಳನ್ನು ತಂಡ ಸಂಗ್ರಹಿಸಿದ್ದು, ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಇವುಗಳನ್ನು ಒಳಪಡಿಸಲಾಗುತ್ತದೆ. ಸಮೀಕ್ಷೆ ನಡೆಸುವಂತೆ ಸಂಭಲ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆಂಸಿಯಾ ಅವರು ಇಲಾಖೆಗೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.