ADVERTISEMENT

ಅಸ್ಸಾಂ | ಲವ್ ಜಿಹಾದ್ ತಡೆಗೆ ಹೊಸ ಮಸೂದೆ: ಹಿಮಂತ ಬಿಸ್ವಾ ಶರ್ಮಾ

ಪಿಟಿಐ
Published 22 ಅಕ್ಟೋಬರ್ 2025, 10:08 IST
Last Updated 22 ಅಕ್ಟೋಬರ್ 2025, 10:08 IST
   

ಗುವಾಹಟಿ: ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಬಹುಪತ್ನಿತ್ವವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ತಿಂಗಳು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಹೊಸ ಮಸೂದೆಗಳನ್ನು ರಾಜ್ಯ ಸರ್ಕಾರ ಮಂಡಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬುಧವಾರ ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟದಿಂದ ಕರಡು ಮಸೂದೆಗೆ ಅನುಮತಿ ಸಿಕ್ಕ ನಂತರ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಲವ್ ಜಿಹಾದ್, ಬಹುಪತ್ನಿತ್ವ ತಡೆ, ಸತ್ರ( ವೈಷ್ಣವ ಮಠ)ಗಳ ಸಂರಕ್ಷಣೆ ಹಾಗೂ ಬುಡಕಟ್ಟು ಜನಾಂಗದ ಭೂ ಹಕ್ಕುಗಳ ಕುರಿತ ಮಸೂದೆಗಳನ್ನು ಮಂಡಿಸಲಾಗುತ್ತಿದೆ. ಇದು ಐತಿಹಾಸಿಕ ಘಟನೆಯಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಆದರೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಿಟ್ಟುಕೊಡಲಿಲ್ಲ.

ಮುಂದಿನ ತಿಂಗಳಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ಜರುಗಲಿದ್ದು, ಪ್ರಮುಖ ಮಸೂದೆಗಳು ಮಂಡನೆಯಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.