ADVERTISEMENT

ಪಂಚರಾಜ್ಯ ಚುನಾವಣೆಯಲ್ಲಿ ಚಲಾವಣೆಯಾದ ನೋಟಾ ಮತಗಳೆಷ್ಟು?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 8:02 IST
Last Updated 11 ಮಾರ್ಚ್ 2022, 8:02 IST
   

ಉತ್ತರಪ್ರದೇಶ, ಉತ್ತರಾಖಂಡ,ಪಂಜಾಬ್‌, ಮಣಿಪುರ ಮತ್ತುಗೋವಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶ ಮಾರ್ಚ್‌ 10ರಂದು ಪ್ರಕಟವಾಗಿದೆ. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಪಂಜಾಬ್‌ನಲ್ಲಿ ಈ ಬಾರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ ಭಾರಿ ಬಹುಮತ ಪಡೆದುಕೊಂಡಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ಒಲಿದಿದೆ.

ಈ ಐದೂ ರಾಜ್ಯಗಳಲ್ಲಿ ನೋಟಾ ಒತ್ತಿದವರ ಸಂಖ್ಯೆ ಬರೋಬ್ಬರಿ7,99,302.

‌403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಹೆಚ್ಚು ಜನರು ನೋಟಾ ಪ್ರಯೋಗಿಸಿದ್ದಾರೆ. ಇಲ್ಲಿನ 6,21,186 ಜನರು ಅಂದರೆ ಶೇ 0.7 ರಷ್ಟು ಮತದಾರರು ಮತಯಂತ್ರದಲ್ಲಿ ನೋಟಾ ಒತ್ತಿದ್ದಾರೆ.

ADVERTISEMENT

ಉತ್ತರಾಖಂಡ (46,830) ಹಾಗೂಪಂಜಾಬ್‌ನಲ್ಲಿ (1,10,308) ಮತ ಚಲಾಯಿಸಿದವರ ಪೈಕಿ ಶೇ0.9 ರಷ್ಟು ಜನರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಉಳಿದಂತೆ,ಮಣಿಪುರದಲ್ಲಿ ಶೇ 0.6 ರಷ್ಟು ಅಂದರೆ,10,349 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಗೋವಾದಲ್ಲಿ ಈ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದೆ. ಇಲ್ಲಿನ ಶೇ 1.1 ರಷ್ಟು ಜನರು (10,629) ಈ ಆಯ್ಕೆ ಬಳಸಿಕೊಂಡಿದ್ದಾರೆ.

ಯಾವುದೇ ಅಭ್ಯರ್ಥಿಗೆ ಮತಹಾಕಲು ಇಚ್ಚಿಸದ ಮತದಾರರಿಗಾಗಿ 2013ರಲ್ಲಿ ಮೊದಲ ಬಾರಿಗೆ ನೋಟಾ ಆಯ್ಕೆ ಪರಿಚಯಿಸಲಾಗಿತ್ತು. ಸುಪ್ರೀಂ ಕೋರ್ಟ್ ಅದೇಶದ ಬಳಿಕ ವಿದ್ಯುನ್ಮಾನ ಮತಯಂತ್ರದಲ್ಲಿ ಕೊನೆಯ ಆಯ್ಕೆಯಾಗಿ ನೋಟಾ ಚಿಹ್ನೆ ಸೇರಿಸಲಾಗಿತ್ತು.

ಆದಾಗ್ಯೂ, ಅಭ್ಯರ್ಥಿಗಳು ಪಡೆಯುವ ಮತಕ್ಕಿಂತನೋಟಾ ಮತಗಳ ಸಂಖ್ಯೆ ಹೆಚ್ಚಾದರೆ, ಮತ್ತೊಮ್ಮೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸುಪ್ರೀಂ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.