ADVERTISEMENT

ಅಯೋಧ್ಯೆಯಲ್ಲಿ ಧಾರ್ಮಿಕ ಸಭೆ ಸೇರುವಿಕೆಗೆ ನಿರ್ಬಂಧ ವಿಧಿಸುವ ಸಾಧ್ಯತೆ

ಪಿಟಿಐ
Published 16 ಏಪ್ರಿಲ್ 2021, 5:20 IST
Last Updated 16 ಏಪ್ರಿಲ್ 2021, 5:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಯೋಧ್ಯೆ: ಹರಿದ್ವಾರ ಕುಂಭ ಮೇಳದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಸಾಧು ಸಂತರ ಹೆಚ್ಚಾಗುತ್ತಿದ್ದು, ಕೋವಿಡ್ 19 ಸೋಂಕು ಹರಡುವಿಕೆ ತಡೆಗೆ ಅಲ್ಲಿನ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.

ರಾಮ ನವಮಿ ಸಂದರ್ಭದಲ್ಲಿ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.

ಹೀಗಾಗಿ ಭೇಟಿ ನೀಡುವವರು 48 ಗಂಟೆಗಳ ಅವಧಿಯಲ್ಲಿ ಪಡೆದಿರುವ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಕಡ್ಡಾಯ ಹೊಂದಿರುವ ಕ್ರಮ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎ ಕೆ ಝಾ ತಿಳಿಸಿದ್ದಾರೆ.

ADVERTISEMENT

ಸಂಪ್ರದಾಯದ ಪ್ರಕಾರ, ರಾಮನವಮಿ ಆಚರಣೆಗೆ ದೇಶದ ಎಲ್ಲ ಸಾಧು ಸಂತರು ಪ್ರತಿವರ್ಷ ಅಯೋಧ್ಯೆಗೆ ಭೇಟಿ ನೀಡುವ ಪರಿಪಾಠವಿದೆ. ಹೀಗಾಗಿ ಹೆಚ್ಚಿನ ಜನರ ಸೇರುವಿಕೆಯಿಂದ ಕೋವಿಡ್ 19 ಸೋಂಕು ಹರಡುವಿಕೆ ಅಪಾಯ ಇರುವುದರಿಂದ ಅದನ್ನು ತಡೆಯಲು ಸೂಕ್ತ ಕ್ರಮಕ್ಕೆ ಆಡಳಿತ ಯೋಚಿಸುತ್ತಿದೆ.

ಏಪ್ರಿಲ್ 21ರಂದು ಅಯೋಧ್ಯೆಗೆ ರಾಮನವಮಿ ಆಚರಿಸಲು ಧರ್ಮಗುರುಗಳು ಮತ್ತು ಭಕ್ತರು ತೆರಳಲಿದ್ದಾರೆ. ಹರಿದ್ವಾರ ಕುಂಭಮೇಳದಲ್ಲಿ ಭಾಗವಹಿಸಿದ್ದವರ ಪೈಕಿ 1,700ಕ್ಕೂ ಅಧಿಕ ಭಕ್ತರು ಮತ್ತು ಸಂತರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.