ADVERTISEMENT

ಸಾವಿರ ವರ್ಷಗಳವರೆಗೆ 'ರಾಮ ರಾಜ್ಯ' ಸ್ಥಾಪನೆಗೆ ನಾಂದಿಯಾದ ರಾಮ ಮಂದಿರ: BJP ನಿರ್ಣಯ

ಪಿಟಿಐ
Published 18 ಫೆಬ್ರುವರಿ 2024, 14:06 IST
Last Updated 18 ಫೆಬ್ರುವರಿ 2024, 14:06 IST
<div class="paragraphs"><p>ರಾಮ ಮಂದಿರದಲ್ಲಿ ಬೆಳಕಿನ ಚಿತ್ತಾರ</p></div>

ರಾಮ ಮಂದಿರದಲ್ಲಿ ಬೆಳಕಿನ ಚಿತ್ತಾರ

   

ಪಿಟಿಐ ಚಿತ್ರ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದ ಕುರಿತು ಭಾನುವಾರ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಂದಿನ ಸಾವಿರ ವರ್ಷಗಳವರೆಗೆ ಭಾರತದಲ್ಲಿ ರಾಮ ರಾಜ್ಯ ಸ್ಥಾಪಿಸುವುದಕ್ಕೆ ಮಂದಿರವು ನಾಂದಿಯಾಗಿದೆ ಎಂದು ಅದರಲ್ಲಿ ಪ್ರತಿಪಾದಿಸಲಾಗಿದೆ.

ADVERTISEMENT

ಕಳೆದ ತಿಂಗಳಷ್ಟೇ ಬಾಲ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿರುವ ದೇವಾಲಯವು ರಾಷ್ಟ್ರೀಯ ಪ್ರಜ್ಞೆಯ ಪ್ರತೀಕವಾಗಿದೆ. ಅಷ್ಟಲ್ಲದೆ, 'ವಿಕಸಿತ ಭಾರತ' ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

'ಶ್ರೀ ರಾಮ ಜನ್ಮಭೂಮಿಯಾದ ಪ್ರಾಚೀನ ಧಾರ್ಮಿಕ ನಗರ ಅಯೋಧ್ಯೆಯಲ್ಲಿ ಭವ್ಯ ಹಾಗೂ ಪವಿತ್ರ ದೇವಾಲಯ ನಿರ್ಮಿಸಿರುವುದು ದೇಶದ ಪಾಲಿಗೆ ಐತಿಹಾಸಿಕ ಮತ್ತು ಅದ್ಭುತ ಸಾಧನೆಯಾಗಿದೆ. ಇದು ಮುಂದಿನ 1,000 ವರ್ಷಗಳವರೆಗೆ ಭಾರತದಲ್ಲಿ ಹೊಸ 'ಕಾಲಚಕ್ರ' ಆರಂಭದೊಂದಿಗೆ 'ರಾಮ ರಾಜ್ಯ' ಸ್ಥಾಪನೆಗೆ ನಾಂದಿಯಾಗಿದೆ' ಎಂದು ತಿಳಿಸಲಾಗಿದೆ.

'ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಿದ್ದಕ್ಕಾಗಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸಮಾವೇಶವು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ' ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.