ನವದೆಹಲಿ: ಅಯೋಧ್ಯೆಯ ರಾಮ ದೇಗುಲ 2023ರ ಅಂತ್ಯದ ವೇಳೆಗೆ ಭಕ್ತರ ದರ್ಶನಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ರಾಮ ದೇಗುಲ ಟ್ರಸ್ಟ್‌ನ ಮೂಲಗಳು ತಿಳಿಸಿವೆ.
ಆದರೆ, ಇಡೀ ದೇಗುಲದ ನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ 2025ರ ವೇಳೆಗಷ್ಟೇ ಪೂರ್ಣಗೊಳ್ಳಬಹುದು ಎಂದೂ ಮೂಲಗಳು ಹೇಳಿವೆ.
ಮುಖ್ಯ ದೇಗುಲವು ಮೂರು ಮಹಡಿಗಳನ್ನು ಮತ್ತು ಐದು ‘ಮಂಟಪ’ಗಳನ್ನು ಒಳಗೊಂಡಿರಲಿದೆ. ದೇಗುಲವು 360 ಅಡಿ ಉದ್ದ, 325 ಅಡಿ ಅಗಲವಿರಲಿದ್ದು, ಪ್ರತಿ ಮಹಡಿಯ ಎತ್ತರ 20 ಅಡಿಗಳಷ್ಟಿರಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
‘ದೇಗುಲದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆ ಪ್ರಕಾರ 2023ರ ಅಂತ್ಯದ ವೇಳೆಗೆ ‘ಗರ್ಭಗುಡಿ’ ಕೆಲಸ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ’ ಎಂದು ಮೂಲಗಳು ತಿಳಿಸಿವೆ.
2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದಾಗಿದೆ. ಅಂದುಕೊಂಡಂತೆಯೇ ಆದರೆ ಬಿಜೆಪಿಯು ಇದನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.