ADVERTISEMENT

ರಿಕಿ ಕೇಜ್‌ ಜತೆ ನಿರಾಶ್ರಿತರ ‘ಜನ ಗಣ ಮನ’: ಭಾರತಕ್ಕೆ ವಿಶ್ವಸಂಸ್ಥೆ ವಿಶೇಷ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2022, 14:07 IST
Last Updated 15 ಆಗಸ್ಟ್ 2022, 14:07 IST
ನಿರಾಶ್ರಿತ ಯುವಕ–ಯುವತಿಯರು ಹಾಗೂ ರಿಕಿ ಕೇಜ್‌ ಜತೆಯಾಗಿ ರಾಷ್ಟ್ರಗೀತೆ ಹಾಡಿದರು (ಚಿತ್ರ ಕೃಪೆ– ವಿಶ್ವಸಂಸ್ಥೆಯ ಭಾರತ ಘಟಕದ ಟ್ವಿಟರ್ ಖಾತೆಯಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್)
ನಿರಾಶ್ರಿತ ಯುವಕ–ಯುವತಿಯರು ಹಾಗೂ ರಿಕಿ ಕೇಜ್‌ ಜತೆಯಾಗಿ ರಾಷ್ಟ್ರಗೀತೆ ಹಾಡಿದರು (ಚಿತ್ರ ಕೃಪೆ– ವಿಶ್ವಸಂಸ್ಥೆಯ ಭಾರತ ಘಟಕದ ಟ್ವಿಟರ್ ಖಾತೆಯಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್)   

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತಕ್ಕೆ ವಿಶ್ವಸಂಸ್ಥೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ.

ಭಾರತದಲ್ಲಿರುವ ಹಲವು ದೇಶಗಳ ನಿರಾಶ್ರಿತ ಯುವಕ–ಯುವತಿಯರು ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌ ಜತೆಯಾಗಿ ರಾಷ್ಟ್ರಗೀತೆ ಹಾಡಿರುವ ವಿಡಿಯೊವನ್ನು ವಿಶ್ವಸಂಸ್ಥೆಯ ಭಾರತ ಘಟಕ ಟ್ವೀಟ್ ಮಾಡಿದೆ.

‘ನಿಮ್ಮ ದಯೆ, ಪ್ರೀತಿ ಮತ್ತು ಬೆಂಬಲಕ್ಕೆ ನಾವು ಕೃಜ್ಞರು’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿರಾಶ್ರಿತ ಯುವಕ–ಯುವತಿಯರು ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌ ಜತೆಯಾಗಿ ಭಾರತಕ್ಕೆ ಮತ್ತು ಭಾರತ ಸರ್ಕಾರಕ್ಕೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಶ್ರೀಲಂಕಾ, ಅಫ್ಗಾನಿಸ್ತಾನ, ಮ್ಯಾನ್ಮಾರ್ ಸೇರಿದಂತೆ ಹಲವು ದೇಶಗಳ ನಿರಾಶ್ರಿತರು ರಿಕಿ ಕೇಜ್‌ ಜತೆ ‘ಜನ ಗಣ ಮನ’ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.