ADVERTISEMENT

ಪ. ಬಂಗಾಳ| ಬ್ಯಾಟರಿ ಚಾಲಿತ ವಾಹನಕ್ಕೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ವಿನಾಯಿತಿ

ಪಿಟಿಐ
Published 11 ಮಾರ್ಚ್ 2022, 14:14 IST
Last Updated 11 ಮಾರ್ಚ್ 2022, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ: ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರು 2022-23ರ ಸಾಲಿಗೆ 3.21 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಶುಕ್ರವಾರ ಮಂಡಿಸಿದರು. ಬಜೆಟ್‌ ಮಂಡನೆ ವೇಳೆ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ಮಾಡಿತು.

ಸರ್ಕಾರದ ಆದಾಯ ಸ್ವೀಕೃತಿಗಳು ₹1,98,047 ಕೋಟಿಗಳಿದ್ದು, ಸಾರ್ವಜನಿಕ ಸಾಲವಾಗಿ 1,14,958 ಕೋಟಿಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಬ್ಯಾಟರಿ ಚಾಲಿತ ಮತ್ತು ಸಿಎನ್‌ಜಿ ವಾಹನಗಳಿಗೆ (ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ) ಎರಡು ವರ್ಷಗಳ ಕಾಲ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.