ADVERTISEMENT

ರಾಣಿಯ ಬಟ್ಟೆ ವಿನ್ಯಾಸಗೊಳಿಸಿದ್ದು ಪಶ್ಚಿಮ ಬಂಗಾಳದ ಮಹಿಳೆ

ಪಿಟಿಐ
Published 6 ಮೇ 2023, 16:18 IST
Last Updated 6 ಮೇ 2023, 16:18 IST
ಬಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ನಿಂತು ರಾಯಲ್‌ ಏರ್‌ ಪೋರ್ಸ್‌ನ ಪ್ರದರ್ಶನ ವೀಕ್ಷಿಸಿಸುತ್ತಿರುವ 3ನೇ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ
ಬಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ನಿಂತು ರಾಯಲ್‌ ಏರ್‌ ಪೋರ್ಸ್‌ನ ಪ್ರದರ್ಶನ ವೀಕ್ಷಿಸಿಸುತ್ತಿರುವ 3ನೇ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ   

ಕೋಲ್ಕತ್ತ: 3ನೇ ಚಾರ್ಲ್ಸ್‌ ಮತ್ತು ಕ್ಯಾಮಿಲ್ಲಾ ಪಟ್ಟಾಧಿಕಾರ ಸಮಾರಂಭದಲ್ಲಿ ಧರಿಸುವ ಉಡುಗೆಗಳು ಎಲ್ಲರ ಗಮನ ಸೆಳೆಯುತ್ತವೆ. ಅಂದಹಾಗೆ ರಾಣಿಯ ಬಟ್ಟೆಯನ್ನು ಪಶ್ಚಿಮ ಬಂಗಾಳದ ಫ್ಯಾಷನ್‌ ಡಿಸೈನರ್ ಪ್ರಿಯಾಂಕಾ ಮಲ್ಲಿಕ್‌ ವಿನ್ಯಾಸಗೊಳಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಹೂಗ್ಲಿ ಜಿಲ್ಲೆಯ ಬದಿನಾನ್‌ ಗ್ರಾಮದ ಪ್ರಿಯಾಂಕಾ ಅವರು, ರಾಜನ ಕೋಟ್‌ಗೆ ಅಳವಡಿಸಿಕೊಳ್ಳುವ ಪದಕ ಸೂಜಿ(ಬ್ರೋಚ್‌) ಮತ್ತು ರಾಣಿ ತೊಡುವ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದಾರೆ.

‘ನಾನು ಸಿದ್ಧಪಡಿಸಿದ ಉಡುಗೆ ಮತ್ತು ಪದಕ ಸೂಜಿಯನ್ನು ರಾಜ ದಂಪತಿ ಧರಿಸಿದ್ದಾರೆ ಎಂಬುದು ನನಗೆ ಖುಷಿ ತಂದಿದೆ. ಈ ಬಗ್ಗೆ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಇ–ಮೇಲ್‌ ಮೂಲಕ ನನಗೆ ಪ್ರಶಂಸನಾ ಪತ್ರವೂ ಬಂದಿದೆ’ ಎಂದು ತಿಳಿಸಿದ್ದಾರೆ. 

ADVERTISEMENT

‘ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೂ ಆಹ್ವಾನ ಬಂದಿತ್ತು. ಅನಾರೋಗ್ಯ ನಿಮಿತ್ತ ವೈದ್ಯರ ಸಲಹೆ ಮೇರೆಗೆ ನಾನು ಭಾಗವಹಿಸಲು ಸಾಧ್ಯವಾಗಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.