ADVERTISEMENT

ಜವಾನ್‌ ಚಿತ್ರದಲ್ಲಿನ ಭ್ರಷ್ಟಾಚಾರವನ್ನು ಕಾಂಗ್ರೆಸ್‌ ಆಡಳಿತಕ್ಕೆ ಹೋಲಿಸಿದ ಭಾಟಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಸೆಪ್ಟೆಂಬರ್ 2023, 14:36 IST
Last Updated 14 ಸೆಪ್ಟೆಂಬರ್ 2023, 14:36 IST
<div class="paragraphs"><p>ಗೌರವ್‌ ಭಾಟಿಯಾ-&nbsp;ಶಾರುಖ್‌ ಖಾನ್‌</p></div>

ಗೌರವ್‌ ಭಾಟಿಯಾ- ಶಾರುಖ್‌ ಖಾನ್‌

   

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಭಿಯನದ ಜವಾನ್‌ ಚಿತ್ರ ಇತ್ತೀಚಿಗೆ ತೆರೆಕಂಡಿತ್ತು. ಈ ಚಿತ್ರದಲ್ಲಿ ತೋರಿಸಲಾಗಿರುವ ಭ್ರಷ್ಟಾಚಾರದ ವಿಷಯವನ್ನು ಕಾಂಗ್ರೆಸ್ ವಿರುದ್ಧದ ಆರೋಪಕ್ಕೆ ಬಿಜೆಪಿ ಬಳಸಿಕೊಂಡಿದೆ.

ಈ ಕುರಿತು ಮೈಕ್ರೊ ಬ್ಲಾಗಿಂಗ್ ತಾಣ ಎಕ್ಸ್ (ಟ್ವಿಟರ್‌)ನಲ್ಲಿ ವಿಷಯ ಹಂಚಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, ಕಾಂಗ್ರೆಸ್ ಪಕ್ಷದ 10 ವರ್ಷಗಳ ಭ್ರಷ್ಟಾಚಾರ ತುಂಬಿದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಇದನ್ನು ತೋರಿಸಿದ್ದಕ್ಕಾಗಿ ಶಾರುಖ್‌ ಖಾನ್ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ADVERTISEMENT

ಜವಾನ್‌ ಚಿತ್ರವು ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ ಕರಾಳ ರಾಜಕೀಯವನ್ನು ನೆನಪಿಸುತ್ತದೆ ಎಂದು ಭಾಟಿಯಾ ಟೀಕಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದ ಕಲ್ಲಿದ್ದಲು ಹಗರಣ, 2G ಹಗರಣ ಸೇರಿದಂತೆ ಅನೇಕ ಹಗರಣಗಳು ನಡೆದಿವೆ ಎಂದು ಆರೋಪಿಸಿದ ಅವರು, ಈಗಿನ ನರೇಂದ್ರ ಮೋದಿ ಸರ್ಕಾರವು 9 ವರ್ಷಗಳ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿಕೊಂಡಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.